ತುಮಕೂರು: ಅಬಕಾರಿ ಅಕ್ರಮ: ಕಂಟ್ರೋಲ್ ರೂಂ ಸ್ಥಾಪನೆ

1 min read

 

 

 

 

 

ಅಬಕಾರಿ ಅಕ್ರಮ: ಕಂಟ್ರೋಲ್ ರೂಂ ಸ್ಥಾಪನೆ

Tumkurnews
ತುಮಕೂರು: ಅಬಕಾರಿ ಇಲಾಖೆಯು ಸಾರ್ವತ್ರಿಕ ಲೋಕಸಭೆ ಚುನಾವಣೆ-2024ರ ನಿಮಿತ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಅನ್ನು ತೆರೆದಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಮಾರ್ಚ್ 29ರ ವರೆಗೆ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಆದೇಶ

ಸಾರ್ವಜನಿಕರು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ಮಾರಾಟ, ಅಕ್ರಮ ಮದ್ಯ ತಯಾರಿಕಾ ವಸ್ತುಗಳು ಮತ್ತು ಗಾಂಜಾ, ಅಫೀಮು, ಡ್ರಗ್ಸ್ ಹಾಗೂ ಇನ್ನಿತರೆ ಯಾವುದೇ ಮಾದಕ ವಸ್ತುಗಳ ಅಕ್ರಮ ತಯಾರಿಕೆ, ಶೇಖರಣೆ, ಸಾಗಾಣಿಕೆ, ಮಾರಾಟದಂತಹ ಅಕ್ರಮಗಳು ಕಂಡು ಬಂದಲ್ಲಿ ಅಬಕಾರಿ ಉಪ ಅಯುಕ್ತರ ಕಚೇರಿ, ತುಮಕೂರು ಜಿಲ್ಲೆ, ತುಮಕೂರು ಇವರ ಕಚೇರಿಯಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂನ ಟೋಲ್ ಫ್ರೀ ಸಂಖ್ಯೆ:18004255440ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

You May Also Like

More From Author

+ There are no comments

Add yours