ಭಾರತ್ ಜೋಡೋ ಖಂಡಿಸಿ ಪ್ರತಿಭಟನೆ, ದಿಢೀರ್ ಸುದ್ದಿಗೋಷ್ಟಿ! ಜನಬೆಂಬಲ ಕಂಡು ಬೆದರಿತೇ ಬಿಜೆಪಿ?

1 min read

Tumkurnews
ತುಮಕೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ವಿನಾಕಾರಣ ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಎಳೆದು ತರಲಾಗುತ್ತಿದೆ ಎಂದು ಸಚಿವರಾದ ಜೆ.ಸಿ ಮಾಧುಸ್ವಾಮಿ ಹಾಗೂ ಬಿ.ಸಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ತುರುವೇಕೆರೆ ಮೂಲಕ ಶನಿವಾರ ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆ ಹಾದುಹೋದ ವೇಳೆ ಸಚಿವರಿಬ್ಬರು‌ ಜಂಟಿ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ‌ವಿರುದ್ದ ಹರಿಹಾಯ್ದರು.

ರಾಜ್ಯದಲ್ಲಿ 7ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ; ತುಮಕೂರಿನಲ್ಲಿ ರಾಹುಲ್ ಸಂಚಲನ
ಭಾರತ್ ಜೋಡೋ ಯಾತ್ರೆಗೆ ನಿರ್ದಿಷ್ಟ ಗುರಿ ಇರಬೇಕು, ಈ ಯಾತ್ರೆಗೆ ಯಾವುದೇ ಉದ್ದೇಶವಿಲ್ಲ, ದೇಶದಲ್ಲಿ ಕಾಂಗ್ರೆಸ್ ಕಳೆದು ಹೋಗುವುದು ನಿಶ್ಚಿತ, ಹಾಗಾಗಿ ಅವರು ಕಾಂಗ್ರೆಸ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಲೇವಡಿ ಮಾಡಿದರು.
ಕಾಂಗ್ರೆಸ್ಸಿಗರು ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಾಕ್ಷಿ ಇಲ್ಲದೇ ಮಾತನಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಮಾಡಬಾರದು ಎಂದರು.
ಸಚಿವ ಬಿ.ಸಿ ನಾಗೇಶ್ ಮಾತನಾಡಿ, ಕಾಂಗ್ರೆಸ್ಸಿಗರ ಪಾದಯಾತ್ರೆ ಕಂಡು ನಮಗೆ ಭಯವಾಗಿಲ್ಲ, ಗುಲಾಂ ನಬಿ ಆಜಾದ್ ನಂತವರಿಗೆ ಭಯವಾಗಿದೆ. ಹಾಗಾಗಿ ಅವರು ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಟೀಕಿಸಿದರು.

ತುಮಕೂರು; ಭಾರತ್ ಜೋಡೋ ಯಾತ್ರೆಯಲ್ಲಿ 30 ಸಾವಿರ ಮಂದಿ ಭಾಗಿ! ಬೆರಗಾದ ಕಾಂಗ್ರೆಸ್
ನಗರದಲ್ಲಿ ಪ್ರತಿಭಟನೆ; ಕಾಂಗ್ರೆಸ್ ದೇಶವನ್ನು ಪಾಕಿಸ್ತಾನ, ಬಾಂಗ್ಲ ಎಂದು ವಿಭಜಿಸಿ ಕೋಟ್ಯಾಂತರ ಜನರ ಹತ್ಯಾಕಾಂಡದ ನೆತ್ತರನ್ನು ಹರಿಸಿ, ಇದೀಗ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ ಭೈರಪ್ಪ ಲೇವಡಿ ಮಾಡಿದರು.
ನಗರದ ಬಿಜಿಎಸ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕವು ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯಶಸ್.ಟಿ.ವೈ ಮತ್ತಿತರರಿದ್ದರು.

ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ; ಪರಮೇಶ್ವರ್
ಬೆದರಿತೇ ಬಿಜೆಪಿ?; ಜಿಲ್ಲೆಯಲ್ಲಿ ಶನಿವಾರ ಸಾಗಿದ ಭಾರತ್ ಜೋಡೋ ಯಾತ್ರೆಯಲ್ಲಿ ಸರಿಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಯಾತ್ರೆ ಸಾಗಿದ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಬಿಜೆಪಿ‌ ಶಾಸಕರಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೇ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ಸಿಕ್ಕಿರುವುದನ್ನು ಕಂಡು ಬಿಜೆಪಿ ಬೆದರಿದೆ ಎಂದು ಕಾಂಗ್ರೆಸ್ ‌ಹಿರಿಹಿರಿ‌ ಹಿಗ್ಗಿದೆ. ಇದಕ್ಕೆ ಪೂರಕವಾಗಿ ಇಂದು ಪಾದಯಾತ್ರೆ ವಿರೋಧಿಸಿ ಬಿಜೆಪಿ ಪ್ರತಿಭಟನೆ, ಸುದ್ದಿಗೋಷ್ಟಿಗಳನ್ನು ನಡೆಸಿದೆ.

ಸಚಿವ ಮಾಧುಸ್ವಾಮಿ ಹಾಗೂ ಬಿ.ಸಿ ನಾಗೇಶ್ ಸುದ್ದಿಗೋಷ್ಟಿ

About The Author

You May Also Like

More From Author

+ There are no comments

Add yours