ಕಾಂಗ್ರೆಸ್ ಸರ್ಕಾರವೇ ಸಾವರ್ಕರ್ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿದೆ!; ಅದೆಲ್ಲಿದೆ ಗೊತ್ತೇ?

1 min read

 

Tumkurnews
ತುಮಕೂರು; ರಾಜ್ಯದಲ್ಲಿ ವಿ.ಡಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಹೌದು, ಅಲ್ಲ ಎನ್ನುವ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ನಗರದಲ್ಲಿ ಸಾವರ್ಕರ್ ಹೆಸರಿನ ಪಾರ್ಕ್’ವೊಂದನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಭಿವೃದ್ಧಿಗೊಳಿಸಿ, ಉದ್ಘಾಟಿಸಿರುವ ವಿಚಾರ ಮುನ್ನಲೆಗೆ ಬಂದಿದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ವಾದಿಸುತ್ತಿರುವ ಕಾಂಗ್ರೆಸ್’ಗೆ ಈ ಪಾರ್ಕ್ ವಿಚಾರ ಇದೀಗ ಮುಜುಗರವನ್ನುಂಟು ಮಾಡಿದೆ. ಕಾಂಗ್ರೆಸ್ ಸರ್ಕಾರವೇ ಸಾವರ್ಕರ್ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿ, ಇದೀಗ ವಿರೋಧಿಸುತ್ತಿರುವುದು ಕಾಂಗ್ರೆಸ್’ನ ಇಬ್ಬಗೆಯ ನೀತಿ ಎಂಬ ಟೀಕೆಗೆ ಕಾರಣವಾಗಿದೆ.

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಅರ್ಚಕ!
ಏನಿದು ಪಾರ್ಕ್ ವಿಷಯ?; ಸದ್ಯ ರಾಜ್ಯದಲ್ಲಿ ವಿ.ಡಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿರುವುದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ನಗರದಲ್ಲಿ ಸಾವರ್ಕರ್ ಹೆಸರಿನಲ್ಲಿ ಉದ್ಯಾನವನವೊಂದನ್ನು ಅಭಿವೃದ್ಧಿ ಪಡಿಸಿತ್ತು!
2015ರಿಂದ 2019ರ ಅವಧಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ 15 ಸದಸ್ಯ ಬಲದ ಕಾಂಗ್ರೆಸ್ ಹಾಗೂ 12 ಸದಸ್ಯ ಬಲದ ಜೆಡಿಎಸ್ ಸಮ್ಮಿಶ್ರವಾಗಿ ಅಧಿಕಾರ ಹೊಂದಿತ್ತು. ಈ ಅವಧಿಯಲ್ಲಿ ನಗರದ ಎಸ್.ಎಸ್ ಪುರಂನ ಪಾರ್ಕ್’ಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು.

ಭೀಕರ ಅಪಘಾತ; ತಂದೆ, ಮಗಳು ಸೇರಿ ಮೂವರು ಸಾವು
ಅಂದಿನ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ಸಂಸದ ಎಸ್.ಪಿ ಮುದ್ದಹನುಮೇಗೌಡ, ಶಾಸಕ ಡಾ.ಎಸ್ ರಫೀಕ್ ಅಹ್ಮದ್, ಮೇಯರ್ ಯಶೋಧ ಮತ್ತಿತರ ಕಾಂಗ್ರೆಸ್ ಜನಪ್ರತಿನಿಧಿಗಳು ಉಪಸ್ಥಿತರಿದ್ದು, ವಿ.ಡಿ ಸಾವರ್ಕರ್ ಅವರನ್ನು ಹಾಡಿ ಹೊಗಳಿದ್ದರು. ಆದರೆ ಅದೇ ಕಾಂಗ್ರೆಸ್ ಮುಖಂಡರು ಇಂದು ಸಾವರ್ಕರ್’ರನ್ನು ವಿರೋಧಿಸುತ್ತಿರುವುದು ಟೀಕೆಗೆ ಕಾರಣವಾಗಿದೆ.
1 ಕೋಟಿ ವೆಚ್ಚ; ಈ ಪಾರ್ಕ್ ಅಭಿವೃದ್ಧಿಗೆ ಅಂದಿನ ಕಾಂಗ್ರೆಸ್ ಆಡಳಿತದ ಪಾಲಿಕೆಯು ಭರ್ತಿ 1 ಕೋಟಿ ರೂ. ವೆಚ್ಚ ಮಾಡಿತ್ತು. ಒಟ್ಟಾರೆಯಾಗಿ ಒಂದೆಡೆ ಅಧಿಕಾರದಲ್ಲಿದ್ದಾಗ ಸಾವರ್ಕರ್ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿ, ಹಾಡಿ‌ಹೊಗಳಿದ್ದ ಕಾಂಗ್ರೆಸ್ ಇಂದು ವಿರೋಧಿಸುತ್ತಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.

(ಚಿತ್ರ; ಸ್ವಾತಂತ್ರ್ಯ ವೀರ ಸಾವರ್ಕರ್ ಪಾರ್ಕ್ ಅನ್ನು ರೋಷನ್ ಬೇಗ್ ಉದ್ಘಾಟಿಸುತ್ತಿರುವುದು)

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ

About The Author

You May Also Like

More From Author

+ There are no comments

Add yours