ನ್ಯಾಯಾಂಗವನ್ನು ಬಿಜೆಪಿ ಪಕ್ಷ ನಡೆಸುವುದಿಲ್ಲ; ಡಿಕೆಶಿಗೆ ಬಿಜೆಪಿ ಟಾಂಗ್

1 min read

Tumkurnews
ತುಮಕೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ‌ವಿರುದ್ಧ ತನಿಖಾ ಸಂಸ್ಥೆಗಳು ದಾಳಿ ನಡೆಸಿ, ತನಿಖೆ ನಡೆಸುತ್ತಿರುವುದಕ್ಕೆ ಬಿಜೆಪಿ ಹೊಣೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ತುಮಕೂರಿನಲ್ಲಿ ಕುರುಬರ ಜಾಗೃತಿ ಸಮಾವೇಶ; ಸಿದ್ದರಾಮಯ್ಯ ಭಾಗಿ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದು ಸೇರಿದಂತೆ ನ್ಯಾಯಾಂಗದ ನಡವಳಿಕೆಗಳಿಗೆ ನಾವ್ಯಾರು ಜವಾಬ್ದಾರರಲ್ಲ. ನ್ಯಾಯಾಲಯವನ್ನು ಬಿಜೆಪಿ‌ ಪಕ್ಷ ನಡೆಸುವುದಿಲ್ಲ. ಸಂವಿಧಾನ ಬದ್ದವಾಗಿ ನ್ಯಾಯಾಲಯ ನಡೆಯುತ್ತದೆ. ಈ ದೇಶದಲ್ಲಿ 130ಕೋಟಿ ಜನರಿದ್ದಾರೆ, ಅವರೆಲ್ಲರ ಮೇಲೂ ಸಿ.ಬಿ.ಐ ತನಿಖೆ ನಡೆಯುವುದಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೆ ನೋಟಿಸ್ ಕೊಡುತ್ತದೆ‌. ಸಿ.ಬಿ.ಐ‌ ಮೇಲೆ ಆರೋಪ ಮಾಡುವವರಿಗೆ ನ್ಯಾಯಾಲಯದ ಮೇಲೆ ವಿಶ್ವಾಸವಿಲ್ಲ ಎಂದರ್ಥ ಎಂದರು.
ಪಠ್ಯ ಪುಸ್ತಕ ಕೇಸರೀಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೆಲವೊಂದು ಬದಲಾವಣೆ ತರಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮುಂದಾಗಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೊರೆಯಾಗದೆ ಇರೋ ಹಾಗೆ ಶಿಕ್ಷಣ ಸಚಿವರು ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಯಾವ ರೀತಿ ಬದಲಾವಣೆ ತರಬೇಕೆಂದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.

ಮತದಾರರ ಗುರುತಿನ ಚೀಟಿ ವಿತರಣೆಗೆ ಗ್ರಹಣ; ಕಾರಣ ಕ್ಷುಲ್ಲಕ!

About The Author

You May Also Like

More From Author

+ There are no comments

Add yours