ಜಿಲ್ಲೆಯಲ್ಲಿ ಶತಕ ದಾಟಿದ ಕೊರೋನಾ, ಒಂದೇ ದಿನ 20 ಪಾಸಿಟಿವ್!

1 min read

 

ತುಮಕೂರು(ಜೂ.30) tumkurnews.in

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 20 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 113ಕ್ಕೆ ಏರಿದೆ. ಅಲ್ಲದೇ ಓರ್ವ ವ್ಯಕ್ತಿಯ ಸಾವು ಸಂಭವಿಸಿದೆ. ಸದ್ಯ 68 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಣಿಗಲ್ 3, ಮಧುಗಿರಿ 2, ತುಮಕೂರು 6, ಪಾವಗಡ 5, ಕೊರಟಗೆರೆ 1, ಸಿರಾ 3 ಪ್ರಕರಣಗಳು ಪತ್ತೆಯಾಗಿವೆ.

ಸಾವು: ಜೂ.26 ರಂದು ಅಪಘಾತ ಸಂಭವಿಸಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಮಕೂರಿನ ಮರಳೂರು ದಿಣ್ಣೆಯ 29 ವರ್ಷದ ಯುವಕ ಮಂಗಳವಾರ ಸಾವನ್ನಪ್ಪಿದ್ದು, ಆತನಿಗೆ ಕೊರೋನಾ ಪಾಸಿಟಿವ್ ಬಂದಿದೆ.

About The Author

You May Also Like

More From Author

+ There are no comments

Add yours