ತಿಪಟೂರು: ಕೊಬ್ಬರಿ ಟೆಂಡರ್ ದಿನ ಮತ್ತು ಸಮಯ ಬದಲಾವಣೆಗೆ ರೈತರ ವಿರೋಧ: ಪ್ರತಿಭಟನೆಗೆ ನಿರ್ಧಾರ

0 min read

 

ಕೊಬ್ಬರಿ ಟೆಂಡರ್ ದಿನ ಮತ್ತು ಸಮಯ ಬದಲಾವಣೆಗೆ ರೈತರ ವಿರೋಧ: ಪ್ರತಿಭಟನೆಗೆ ನಿರ್ಧಾರ

ತುಮಕೂರು: ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಟೆಂಡರ್ ದಿನ ಮತ್ತು ಸಮಯ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಹಾಗೂ ಹಿಂದಿನ ಪದ್ದತಿಯನ್ನು ಮುಂದುವರೆಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಪಂ ಸಿಇಒ ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯು ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದು, ಇತಿಹಾಸ ಸೇರಿರುತ್ತದೆ. 1952 ರಲ್ಲಿ ಸ್ಥಾಪಿತವಾದ ಮಾರುಕಟ್ಟೆ ಇಲ್ಲಿಯವರೆಗೂ ರೈತರಿಗೆ ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದೆ.
ಆದರೆ ಇತ್ತೀಚೆಗೆ ಆಡಳಿತ ಮಂಡಳಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ ಸ್ಕಾಲರ್‍ ಶಿಪ್!: ಅಧಿಕಾರಿಗಳು ಹೇಳಿದ್ದೇನು?
ಅಕ್ಟೋಬರ್ 1ರಿಂದ ಈ ಹಿಂದೆ ಇದ್ದಂತಹ ಟೆಂಡರ್ ದಿನ ಬುಧವಾರ ಮತ್ತು ಶನಿವಾರದ ಬದಲಾಗಿ ಸೋಮವಾರ ಮತ್ತು ಗುರುವಾರ ಮಾಡಿರುವುದು ಸರಿಯಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದೆ ಎಂದು ‌ಮನವಿ ಪತ್ರದಲ್ಲಿ ದೂರಲಾಗಿದೆ.
ಟೆಂಡರ್ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ. ಅಂದರೆ ಮಧ್ಯಾಹ್ನ 2 ಗಂಟೆ ಬದಲಾಗಿ 3 ಗಂಟೆಗೆ ಟೆಂಡರ್ ಪ್ರಕ್ರಿಯೆ ಮಾಡಿರುವುದರಿಂದ ರೈತರು ತಮ್ಮ ತಮ್ಮ ಮನೆಗೆ ಹಿಂದಿರುಗಲು ತಡವಾಗುತ್ತದೆ. ಇದರಿಂದ ದಿನನಿತ್ಯದ ಕೃಷಿ ಚಟುವಟಿಕೆ, ಹೈನುಗಾರಿಕೆ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತದೆ. ಇದಲ್ಲದೆ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಇಲ್ಲದಿದ್ದು ನಡೆದು ಹೋಗುವ ಸಂದರ್ಭವೂ ಕೂಡ ಇರುತ್ತದೆ. ಅಂತಹ ಸಮಯದಲ್ಲಿ ಕಳ್ಳ ಕಾಕರ ಹಾಗೂ ಕಾಡುಪ್ರಾಣಿಗಳ ಭಯದಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಪತ್ರದಲ್ಲಿ ರೈತರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ತುಮಕೂರಿಗೆ 70 ಕೋಟಿ ವೆಚ್ಚದ ಕಾರ್ಡಿಯಾಲಜಿ ಕೇಂದ್ರ, 130 ಕೋಟಿಯ ಆಸ್ಪತ್ರೆ! ಪರಂ
ಇದಲ್ಲದೆ ತುಮಕೂರು ಜಿಲ್ಲಾ ಎಪಿಎಂಸಿ ಮಾರುಕಟ್ಟೆಯೂ ಸಹ ಸೋಮವಾರ, ಗುರುವಾರ ನಡೆಯುವುದರಿಂದ ಎರಡು ಕಡೆ ಏಕಕಾಲದಲ್ಲಿ ರೈತರು ಬರಲು ಸಾಧ್ಯವಾಗುವುದಿಲ್ಲ. ಜೊತೆಗೆ ರೈತರಿಗೆ ಇದರಿಂದ ಗೊಂದಲ ಉಂಟಾಗುತ್ತದೆ. ಇದು ಯಾರದ್ದೋ ಒತ್ತಡಕ್ಕೆ ಮಣಿದು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಈ ಹಿಂದೆ ಇತಿಹಾಸದಿಂದ ಬಂದಿದ್ದಂತಹ ವಾರ, ದಿನಗಳು ಮತ್ತು ಸಮಯವನ್ನು ಯಥಾ ಸ್ಥಿತಿಯಾಗಿ ಕಾಯ್ದುಕೊಂಡು ಹೋಗಬೇಕು, ರೈತರಿಗೆ ಅನ್ಯಾಯವಾಗದಂತೆ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಈ ಬಾರಿ ತುಮಕೂರು ದಸರಾ ಹೇಗಿರುತ್ತೆ ಗೊತ್ತೇ? ಜಿಲ್ಲಾಧಿಕಾರಿ ಮಾಹಿತಿ
ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ತೆಂಗು ಬೆಳೆಗಾರರು ಹಾಗೂ ರೈತ ಹಿತೈಷಿಗಳೊಂದಿಗೆ ಸೇರಿ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್, ಗೌರವಾಧ್ಯಕ್ಷ ಬ್ರಹ್ಮಸಂದ್ರ ಪುಟ್ಟರಾಜು, ಉಪಾಧ್ಯಕ್ಷ ರಾಜಣ್ಣ, ಶ್ರೀನಿವಾಸ್ ಅರಿಯೂರು, ಪ್ರಧಾನ ಕಾರ್ಯದರ್ಶಿಯಾದ ಆನಂದ್ ಬಿ.ಎಂ., ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಗೌಡಿಹಳ್ಳಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಎಚ್ ಹುಚ್ಚಯ್ಯ ಮತ್ತಿತರರಿದ್ದರು.

About The Author

You May Also Like

More From Author

+ There are no comments

Add yours