Tumkurnews
ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು ಎಸ್.ಎಸ್ ಬಾರ್ ನ ಐವರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಪತ್ತೆ ಮಾಡುವ ಮೂಲಕ ತುಮಕೂರು ಪೊಲೀಸರು ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತುಮಕೂರು ಖಾಸಗಿ ಬಸ್ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ
ಬಾರ್’ನಲ್ಲೇ ಕೊಲೆ; ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದ ಮುಬಾರಕ್ ಪಾಷಾ(34) ಕಳೆದ ರಾತ್ರಿ ಎಸ್.ಎಸ್ ಬಾರ್’ನಲ್ಲಿ ಕೊಲೆಯಾಗಿದ್ದನು. ಬಾರ್’ನಲ್ಲಿ ಮದ್ಯ ಸೇವನೆಗೆ ಬಂದಿದ್ದ ಆತ ಅಲ್ಲಿನ ಸಪ್ಲೇಯರ್ ಜೊತೆಗೆ ಜಗಳ ಮಾಡಿಕೊಂಡಿದ್ದನು. ಜಗಳ ವಿಕೋಪಕ್ಕೆ ತಿರುಗಿದಾಗ ಬಾರ್ ಸಪ್ಲೇಯರ್ ಮತ್ತು ಕೆಲವು ಸಿಬ್ಬಂದಿ ಸೇರಿಕೊಂಡು ಮುಬಾರಕ್ ಪಾಷಾನನ್ನು ತೀವ್ರವಾಗಿ ತಳಿಸಿ, ಮಾರಾಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆವರೆಗೆ ಶವಕ್ಕೆ ಕಾವಲು; ಮುಬಾರಕ್ ಪಾಷಾನನ್ನು ಕೊಲೆ ಮಾಡಿದ ಬಳಿಕ ಬೆಳಗ್ಗೆ ನಾಲ್ಕು ಗಂಟೆಯವರೆಗೆ ಶವವನ್ನು ಬಾರ್’ನಲ್ಲೇ ಇಟ್ಟುಕೊಂಡು ಕಾವಲು ಕಾದಿದ್ದರು. ಹೊರಗೆ ಜನಸಂಚಾರ, ವಾಹನ ಸಂಚಾರ ಕಡಿಮೆಯಾಗುತ್ತಿದ್ದಂತೆ ಶವವನ್ನು ಹೊತ್ತೊಯ್ದು ಸುಮಾರು 200 ಮೀಟರ್ ದೂರದ ಖಾಸಗಿ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿದ್ದರು. ಇದೀಗ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.
20 ಸಾವಿರ ಉದ್ಯೋಗ, SSCಯಿಂದ ಹಿಂದಿ, ಇಂಗ್ಲೀಷ್’ನಲ್ಲಿ ಪರೀಕ್ಷೆ; ಕನ್ನಡದಲ್ಲೂ ಪರೀಕ್ಷೆಗೆ ಎಚ್ಡಿಕೆ ಆಗ್ರಹ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours