ಪ್ರಧಾನಿ ಮೋದಿ ಮಿತವ್ಯಯ ಕರೆಗೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ!
ಮಿತವ್ಯಯಕ್ಕೆ ಸಹಮತ ಎಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ. ಬಿ ಜಯಚಂದ್ರ
Tumkur news
ತುಮಕೂರು: ಮಿತವ್ಯಯದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಲಹೆ ಸ್ವೀಕಾರಾರ್ಹ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ ಜಯಚಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಆಗುತ್ತಿರುವ ಅನಾಹುತ ಇದು. ಅದಕ್ಕೆ ನಾವೆಲ್ಲ ಜವಾಬ್ದಾರಿ ಹೊರಬೇಕಾಗುತ್ತದೆ. ಅದರ ದುಷ್ಪರಿಣಾಮವೇ ಬೆಲೆ ಏರಿಕೆ.
ಅದು ಎಲ್ಲಾ ಸಂದರ್ಭದಲ್ಲೂ ಸಹ ಆಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲೋ ಒಂದು ಕಡೆ ಹಿತಮಿತವಾಗಿ ಪೆಟ್ರೋಲ್ ಡಿಸೆಲ್ ಬಳಸಬೇಕು.
ಪೆಟ್ರೋಲನ್ನು ನಾವು ಆಮದು ಮಾಡಿಕೊಳ್ಳಬೇಕಾಗುತ್ತದೆ.
ಡಾಲರ್ಸ್ ರೂಪದಲ್ಲಿ ದುಡ್ಡು ಕೊಟ್ಟು ಖರೀದಿ ಮಾಡಬೇಕಾಗುತ್ತದೆ.
ಹಾಗಾಗಿ ಮಿತವಾಗಿ ಬಳಸಬೇಕು ಎಂದರು.
ಕೇಂದ್ರದವರು ಎಲ್ಲರೂ ಸಹಕಾರ ಕೊಡಬೇಕೆಂದು ಕೇಳಿದ್ದಾರೆ, ಅದು ವಾಸ್ತವವಾದ ವಿಚಾರ, ಎಲ್ಲರೂ ಅದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು, ಚಿನ್ನದ ಖರೀದಿಯಲ್ಲೂ ಕಡಿವಾಣ ಹಾಕಿ ಅಂತ ಮೋದಿ ಕರೆ ಕೊಟ್ಟಿದ್ದಾರೆ. ಇಡಿ ವಿಶ್ವದಲ್ಲಿ ನಮ್ಮ ದೇಶದ ಹೆಣ್ಣು ಮಕ್ಕಳೇ ಹೆಚ್ಚು ಚಿನ್ನ ಖರೀದಿ ಮಾಡುವುದು, ಎಲ್ಲೊ ಒಂದು ಕಡೆ ಅದನ್ನು ಮಿತಗೊಳಿಸುವ ಸಂದೇಶವನ್ನು ಪ್ರದಾನಿ ಕೊಟ್ಟಿದ್ದಾರೆ.
18 ಗ್ರಾಂನ ತಾಳಿ ಬದಲು 8 ಗ್ರಾಂನ ತಾಳಿ ಮಾಡಿಕೊಳ್ಳುವುದು, ಅವರ ಸಲಹೆಯನ್ನು ಸ್ವೀಕರಿಸುವುದರ ಜೊತೆಗೆ ಅದು ನಮ್ಮ ಜವಾಬ್ದಾರಿ ಸಹ ಹೌದು ಎನ್ನುವ ಮೂಲಕ ಮೋದಿಯವರ ಸಲಹೆ ಸ್ವೀಕಾರಾರ್ಹ ಎಂದು ಟಿ.ಬಿ ಜಯಚಂದ್ರ ಹೇಳಿದರು.
