ಲಂಡನ್ ನೆನಪಿಸುವ ತುಮಕೂರಿನ ಹೊಸ ಬಸ್ ನಿಲ್ದಾಣ!: ಜನಾಕರ್ಷಣೆ ಎಸ್ಕಲೇಟರ್! ವಿಡಿಯೋ

1 min read

 

ಲಂಡನ್ ಪ್ರಕರಣ ನೆನಪಿಸುವ ತುಮಕೂರು ಬಸ್ ನಿಲ್ದಾಣ!: ಜನಾಕರ್ಷಣೆಯ ಕೇಂದ್ರವಾದ ಎಸ್ಕಲೇಟರ್!

Tumkurnews
ತುಮಕೂರು: ನಗರದ ಕೆ.ಎಸ್. ಆರ್.ಟಿ.ಸಿ ಹೊಸ ಬಸ್‌ ನಿಲ್ದಾಣವು ಜನಾಕರ್ಷಣೆಯ ಕೇಂದ್ರವಾಗಿದ್ದು, ಇಲ್ಲಿನ ಎಸ್ಕಲೇಟರ್(ಚಲಿಸುವ ಮೆಟ್ಟಿಲು, ಏರು ಬಂಡಿ) ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ.
ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳ ಮಾಲ್’ಗಳಲ್ಲಿ ಈ ಎಸ್ಕಲೇಟರ್ ಇರುತ್ತದೆ. ಅದನ್ನು ಅಲ್ಲಿನ ನಗರ ನಿವಾಸಿಗಳು ಸಲೀಸಾಗಿ ಬಳಸುತ್ತಾರೆ. ಅದನ್ನು ಹತ್ತಲು ಅವರಿಗೆ ಭಯವಿರುವುದಿಲ್ಲ. ಆದರೇ‌ ಮೊದಲ ಬಾರಿಗೆ ಎಸ್ಕಲೇಟರ್ ಬಳಸುವರು ಬಹಳ ಭಯದಿಂದ ಹಾಗೂ ಕುತೂಹಲ, ಅಂಜಿಕೆಯಿಂದಲೇ ಬಳಸುತ್ತಾರೆ.
ಎಸ್ಕಲೇಟರ್ ಬಳಸಿ ಅಭ್ಯಾಸವಿರುವವರನ್ನು ಹೊರತುಪಡಿಸಿ ಅಭ್ಯಾಸ ಇಲ್ಲದವರು ಮೊದಲ ಬಾರಿಗೆ ಎಸ್ಕಲೇಟರ್’ನ ಮೆಟ್ಟಿಲು ಹತ್ತಲು ಹತ್ತು ಬಾರಿ ಯೋಚಿಸುತ್ತಾರೆ. ಕೊನೆಗೆ ಧೈರ್ಯ ಮಾಡಿ ಹತ್ತಿಯೇ ಬಿಡುತ್ತಾರೆ. ಇನ್ನೂ ಕೆಲವರು ಆಯಾ ತಪ್ಪಿ ಬೀಳುವ ಭಯದಿಂದ ಹಿಂದೆ ಸರಿದು ಬಿಡುತ್ತಾರೆ. ಇಂತಹದ್ದೇ ದೃಶ್ಯಗಳನ್ನು ಇದೀಗ ತುಮಕೂರಿನ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕಾಣಬಹುದಾಗಿದೆ!

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ! ವಿಡಿಯೋ
ತುಮಕೂರಿನ ಹೊಸ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಎಸ್ಕಲೇಟರ್ ಅನ್ನು ಸಾರ್ವಜನಿಕ ಬಳಕೆಗೆ ಬಿಡಲಾಗಿದೆ. ತುಮಕೂರಿನ ಮಟ್ಟಿಗೆ ಇದೇ ಮೊದಲ ಸರ್ಕಾರಿ ಎಸ್ಕಲೇಟರ್! ಹೀಗಾಗಿ ಜನರು ಬಸ್ ನಿಲ್ದಾಣದಲ್ಲಿರುವ ಎಸ್ಕಲೇಟರ್ ಅನ್ನು ಕುತೂಹಲದಿಂದ ನೋಡುತ್ತಿದ್ದು, ಬಳಸಲು ಭಯ ಪಡುತ್ತಿದ್ದಾರೆ!
ಪ್ರಯಾಣಿಕರು ಬಹುತೇಕರು ಭಯದಿಂದ ಎಸ್ಕಲೇಟರ್ ಹತ್ತುತ್ತಿದ್ದರೆ, ಮತ್ತೆ ಕೆಲವರು ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಮೊದಲ ಬಾರಿಗೆ ಧೈರ್ಯದಿಂದ ಎಸ್ಕಲೇಟರ್ ಬಳಸಿದವರ ಖುಷಿ, ಅನುಭವವನ್ನು ವರ್ಷಿಸಲಸಾಧ್ಯವಾಗಿದೆ. ಮಹಿಳೆಯರು, ಮಕ್ಕಳು ಪದೇ ಪದೇ ಎಸ್ಕಲೇಟರ್ ಹತ್ತಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಗ್ರಾಮೀಣ ಜನರ ಈ ಖುಷಿಯನ್ನು ನೋಡುವುದೇ ಒಂದು ಆನಂದ.

ತುಮಕೂರು: ಕಿಕ್ಕಿರಿದು ತುಂಬಿದ್ದ ಬಸ್ ನಿಲ್ದಾಣ ಹತ್ತೇ ನಿಮಿಷದಲ್ಲಿ ಖಾಲಿ! ವಿಡಿಯೋ
ತುಮಕೂರಿನ ಮಟ್ಟಿಗೆ ಹೇಳುವುದಾದರೆ ಸ್ಮಾರ್ಟ್ ಸಿಟಿ ಕೊಡುಗೆಯಾದ ಹೊಸ ಬಸ್ ನಿಲ್ದಾಣವು ಇಲ್ಲಿನ ಸ್ಥಳೀಯರ ಪಾಲಿಗೆ ಬೆರಗು ಮೂಡಿಸಿರುವುದಂತೂ ನಿಜ.
ಲಂಡನ್’ನಲ್ಲೂ ಹೀಗೆ ಆಗಿತ್ತು!: ತುಮಕೂರಿನ ಹೊಸ ಬಸ್ ನಿಲ್ದಾಣದಲ್ಲಿ ಈಗ ಆಗುತ್ತಿರುವ ಎಸ್ಕಲೇಟರ್ ಪ್ರಹಸನ ಹಿಂದೆ ಲಂಡನ್ ದೇಶದಲ್ಲೂ ಆಗಿತ್ತು! ಹೌದು, 1911ರಲ್ಲಿ ಆಗ ತಾನೇ ಮೊಟ್ಟಮೊದಲ ಬಾರಿಗೆ ಲಂಡನ್‌ನಲ್ಲಿ ಎಸ್ಕಲೇಟರ್‌ ಅಳವಡಿಸಿದ್ದರು. ಆದರೆ ಬಹಳ ದಿನ ಕಳೆದರೂ ಜನ ಅದನ್ನು ಬಳಸುತ್ತಿರಲಿಲ್ಲ, ಹತ್ತಲು ಭಯಪಡುತ್ತಿದ್ದರು. ಇದು ಲಂಡನ್’ನ ಸ್ಥಳೀಯ ಸರ್ಕಾರಕ್ಕೆ ಪೀಕಲಾಟ ತಂದೊಡ್ಡಿತು.

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಜನರಿಗೆ ಹೊಸ ಆಧುನಿಕ ಸವಲತ್ತನ್ನು ಒದಗಿಸಿದರೆ ಜನರು ಅದನ್ನು ಬಳಸುತ್ತಿಲ್ಲವಲ್ಲ ಎಂದು ಸ್ಥಳೀಯ ಸರ್ಕಾರ ತಲೆ ಕೆಡಿಸಿಕೊಂಡಿತು. ಕೊನೆಗೆ ಒಂದು ಉಪಾಯ ಮಾಡಿದರು. ಜನರ ಭಯವನ್ನು ಹೋಗಲಾಡಿಸಲು ಅಲ್ಲಿನ ಸರ್ಕಾರಿ ನೌಕರನಾಗಿದ್ದ ವಿಲಿಯಂ ಬಂಪರ್‌ ಹ್ಯಾರಿಸ್‌ ಎಂಬುವವನನ್ನು ಸಾರ್ವಜನಿಕವಾಗಿ ಎಸ್ಕಲೇಟರ್‌ ಹತ್ತಿಸಿದರು. ವಿಲಿಯಂ ಬಂಪರ್‌ ಕುಂಟನಾಗಿದ್ದ. ಈ ಕುಂಟನೇ ಬಳಸುತ್ತಾನೆಂದರೆ ಎಸ್ಕಲೇಟರ್‌ ಅನ್ನು ಯಾರು ಬೇಕಾದರೂ ಬಳಸಬಹುದು ಎಂಬ ಧೈರ್ಯ ಮೂಡಲಿ ಎಂದೇ ಸರ್ಕಾರ ಈ ಉಪಾಯವನ್ನು ಹೂಡಿತ್ತು. ಆ ಉಪಾಯ ಫ‌ಲಿಸಿತ್ತು! ಆ ಬಳಿಕ ಜನರು ಯಾವುದೇ ಆತಂಕವಿಲ್ಲದೆ ಎಸ್ಕಲೇಟರ್‌ ಬಳಸಲು ಶುರುಮಾಡಿದರು. ತುಮಕೂರಿನಲ್ಲೂ ಹೀಗೆ ಆಗುತ್ತಿದೆ. ಬೇರೆ ಪ್ರಯಾಣಿಕರು, ಅದರಲ್ಲೂ ಶಾಲಾ ಮಕ್ಕಳು ಎಸ್ಕಲೇಟರ್ ಬಳಸುವುದನ್ನು ನೋಡಿ ಉಳಿದವರು ಧೈರ್ಯದಿಂದ ಎಸ್ಕಲೇಟರ್ ಹತ್ತುತ್ತಿದ್ದಾರೆ. ಒಟ್ಟಿನಲ್ಲಿ ತುಮಕೂರಿನ ‌ಮೊದಲ ಸರ್ಕಾರಿ ಎಸ್ಕಲೇಟರ್ ಜನರ ಮನ ತಣಿಸುತ್ತಿದ್ದು, ಸಾರ್ವಜನಿಕರಿಗೆ ಸಂತೋಷ ನೀಡುತ್ತಿದೆ.

About The Author

You May Also Like

More From Author

+ There are no comments

Add yours