ತುಮಕೂರು: ಕಲ್ಪತರು ನಾಡಿಗೆ ಮಲೆನಾಡಿನ ಕಳೆ ತಂದ ಸೋನೆ ಮಳೆ

1 min read

 

ಕಲ್ಪತರು ನಾಡಿಗೆ ಮಲೆನಾಡಿನ ಕಳೆ ತಂದ ಸೋನೆ ಮಳೆ

Tumkurnews
ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ರಾತ್ರಿವರೆಗೂ ಮುಂದುವರಿದಿದೆ.
ಬೆಳ್ಳಂಬೆಳಗ್ಗೆ ಆರಂಭವಾದ ಮಳೆಯಿಂದಾಗಿ ಜನಸಾಮಾನ್ಯರು, ವಿದ್ಯಾರ್ಥಿಗಳು ಮನೆಯಿಂದ ಹೊರ ಹೋಗಲು ಹಾಗೂ ಇತರೆ ದಿನಗೂಲಿ ನೌಕರರು ಸೇರಿದಂತೆ ಕಟ್ಟಡ ಕಾರ್ಮಿಕರ ಕೆಲಸಗಳಿಗೂ ಅಡಚಣೆಯುಂಟಾಗಿತ್ತು.
ಇಂದು ಬೆಳಿಗ್ಗೆಯಿಂದ ನಗರ ಸೇರಿದಂತೆ ವಿವಿಧೆಡೆ ಮೋಡ ಕವಿದ ವಾತಾವರಣದೊಂದಿಗೆ ಸೋನೆ ಮಳೆಯಾಗಿದೆ. ಇದರಿಂದಾಗಿ ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ನೌಕರರು, ಕಟ್ಟಡ ಕಾರ್ಮಿಕರು ಹಾಗೂ ರೈತರ ಕೆಲಸ ಕಾರ್ಯಗಳಿಗೂ ಈ ಜಿಟಿಜಿಟಿ ಮಳೆ ಅಡ್ಡಿಯುಂಟು ಮಾಡಿತು.
ವಾಹನ ಸವಾರರ ಪರದಾಟ: ಜಿಟಿಜಿಟಿ ಮಳೆಯಿಂದಾಗಿ
ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಮಳೆ ನಡುವೆಯೇ ಹರಸಾಹಸಪಟ್ಟು ವಾಹನ ಚಲಾಯಿಸಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು. ಇನ್ನು ಕೆಲವರು ಛತ್ರಿ ಹಿಡಿದು ಮಳೆಯಲ್ಲೇ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು.

ತುಮಕೂರು: ವಿಚ್ಛೇದನಕ್ಕೆ ಬಂದು ವಿವಾಹ ಬಂಧನಕ್ಕೆ ಒಳಗಾದರು! 18 ಜೋಡಿಗಳಿಗೆ ಹೊಸ ಬಾಳು ಕೊಟ್ಟ ಕೋರ್ಟ್
ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಜಿಟಿಜಿಟಿ ಮಳೆಯಿಂದಾಗಿ ಜನಸಾಮಾನ್ಯರು ಹೊರಗೆ ಬರಲು ಹಿಂದೇಟು ಹಾಕುವಂತಾಗಿತ್ತು.
ಒಂದೆಡೆ ಮುಂದುವರೆದಿರುವ ಮೋಡ ಕವಿದ ವಾತಾವರಣ, ಇನ್ನೊಂದೆಡೆ ಜಿಟಿಜಿಟಿ ಮಳೆ ಇವೆರಡರ ನಡುವೆ ಜನಸಾಮಾನ್ಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಜರ್ಕಿನ್, ಸ್ವೆಟರ್, ರೈನ್ ಕೋರ್’ಗಳ ಮೊರೆ ಹೋಗಿದ್ದರು.
ಬೆಳಗ್ಗೆಯಿಂದಲೂ ಮಳೆಯಾಗುತ್ತಿರುವುದರಿಂದ ಜನಸಾಮಾನ್ಯರು ತಮ್ಮ ಗಮ್ಯ ತಲುಪಲು ಆಟೋರಿಕ್ಷಾಗಳತ್ತ ಮುಖ ಮಾಡಿದ್ದರಿಂದ ಆಟೋಗಳಿಗೂ ಡಿಮ್ಯಾಂಡ್ ಸೃಷ್ಠಿಯಾಗಿತ್ತು. ಒಟ್ಟಾರೆಯಾಗಿ ಸೋಮವಾರ ಸುರಿದ ಮಳೆಯು ಜನರಿಗೆ ಮಲೆನಾಡಿನ ನೆನಪು ಮಾಡಿದಂತಿತ್ತು.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ

ಸ್ಥಾಪನೆ

About The Author

You May Also Like

More From Author

+ There are no comments

Add yours