ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಖಂಡಿಸಿ ಜು.22ರಂದು ಪ್ರತಿಭಟನೆ: ವಾಲ್ಮೀಕಿ ಸ್ವಾಭಿಮಾನಿ ಸಂಘ
Tumkurnews
ತುಮಕೂರು: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಅವ್ಯವಹಾರವನ್ನು ಖಂಡಿಸಿ, ತಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜು.22 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಚಳವಳಿ ರಾಜಣ್ಣ ತಿಳಿಸಿದರು.
ತುಮಕೂರು: 6ರಿಂದ 16 ವರ್ಷ ವಯಸ್ಸಿನ ಮಕ್ಕಳ ಮನೆ-ಮನೆ ಸಮೀಕ್ಷೆ
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವುದು ಭ್ರಷ್ಟಾಚಾರವಲ್ಲ, ಹಗಲು ದರೋಡೆ. ಮಂತ್ರಿಗಳು, ಅಧಿಕಾರಿಗಳು, ಸರಕಾರ ಸೇರಿ, ಬುಡಕಟ್ಟು ಜನರಿಗೆ ಸಿಗಬೇಕಾದ ಸರಕಾರದ ಸವಲತ್ತುಗಳನ್ನು ತಿಂದು ತೇಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಪಾತ್ರವಿದ್ದು, ಸೂಕ್ತ ತನಿಖೆ ಮೂಲಕ ರಾಜ್ಯದ ಜನರ ಮುಂದೆ ಸತ್ಯ ಹೊಂದಿದೆ ಬರಬೇಕೆಂದು ಆಗ್ರಹಿಸಿದರು.
ಹಣಕಾಸು ಇಲಾಖೆ ಇರುವುದು ಮುಖ್ಯಮಂತ್ರಿಗಳ ಕೈಯಲ್ಲಿ. ಇಷ್ಟೊಂದು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿರುವಾಗ ಗಮನ ಹರಿಸಬೇಕಾಗಿತ್ತು. ಅದನ್ನು ಬಿಟ್ಟು ನನ್ನ ಗಮನಕ್ಕೆ ಬಂದಿಲ್ಲ ಎಂದು ನುಣುಚಿಕೊಳ್ಳುವುದು ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ವರ್ಗಕ್ಕೆ ಸಿಗಬೇಕಾದ ಸವಲತ್ತುಗಳ ಕುರಿತು ಕ್ರಿಯಾಯೋಜನೆಯೇ ಸಿದ್ದಗೊಂಡಿಲ್ಲ ಎಂದರೆ, ಸರಕಾರ ಏನು ಕಣ್ಣುಮುಚ್ಚಿ ಕುಳಿತಿದೆಯೇ ಎಂದು ಚಳವಳಿ ರಾಜಣ್ಣ ಪ್ರಶ್ನಿಸಿದರು.
ತುಮಕೂರು: ವಿಚ್ಛೇದನಕ್ಕೆ ಬಂದು ವಿವಾಹ ಬಂಧನಕ್ಕೆ ಒಳಗಾದರು! 18 ಜೋಡಿಗಳಿಗೆ ಹೊಸ ಬಾಳು ಕೊಟ್ಟ ಕೋರ್ಟ್
ರಾಜ್ಯ ಸರಕಾರ 2013 ರಿಂದ ಇದುವರೆಗೆ ಸುಮಾರು 3 ಲಕ್ಷ ಕೋಟಿ ರೂಗಳನ್ನು ಎಸ್ಸಿಪಿ, ಟಿಎಸ್ಪಿ ಕಾಯ್ದೆಯಡಿ ಕಾಯ್ದಿರಿಸಿದೆ. ಇಷ್ಟು ಹಣವನ್ನು ಸಮರ್ಪಕವಾಗಿ ಸಮುದಾಯಗಳ ಅಭಿವೃದ್ದಿಗೆ ಬಳಕೆ ಮಾಡಿದ್ದರೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಎಸ್ಸಿ, ಎಸ್ಟಿ ವರ್ಗದ ಜನರನ್ನು ಬಡತನದಿಂದ ಮೇಲೆತ್ತಬಹುದಾಗಿತ್ತು. ಆದರೆ ಬಡವರ ಅಭಿವೃದ್ಧಿಗೆ ಇಟ್ಟ ಹಣವನ್ನು ಇದುವರೆಗೂ ಅಧಿಕಾರ ನಡೆಸಿದ ಎಲ್ಲ ಸರಕಾರಗಳು ತಿಂದು ತೇಗಿವೆ. ಅಭಿವೃದ್ಧಿ ಎಂಬುದು ಕಡತದಲ್ಲಿ ಮಾತ್ರವಿದೆ. ವಾಸ್ತವದಲ್ಲಿ ಶೂನ್ಯ. ಹಾಗಾಗಿ ಸುಮಾರು 2000 ಜನರು ಜುಲೈ 22ರ ಸೋಮವಾರ ಸೂಕ್ತ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮವಹಿಸುವಹಿಸುವುದು ಹಾಗೂ ಅವ್ಯವಹಾರವಾಗಿರುವ ಹಣಕ್ಕೆ ಪರ್ಯಾಯ ಅನುದಾನ ನೀಡಿ ನಿಗಮದ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಶಿರಾ: ಜಿಲ್ಲಾಧಿಕಾರಿ ಶುಭಕಲ್ಯಾಣ್ ಅನಿರೀಕ್ಷಿತ ಭೇಟಿ: ಅಧಿಕಾರಿಗಳು ತಬ್ಬಿಬ್ಬು
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯಹಾರದಲ್ಲಿ ಭಾಗಿಯಾಗಿರುವ 18 ಜನರ ವಿರುದ್ಧ ಎಸ್ಸಿಪಿ, ಟಿಎಸ್ಪಿ ಪ್ರತ್ಯೇಕ ಕಾಯ್ದೆ ಇದ್ದರೂ ಭ್ರಷ್ಟಾಚಾರ ಕಾಯ್ದೆಯಡಿ ಕೇಸು ದಾಖಲಿಸಿರುವುದು ತರವಲ್ಲ. ಅಲ್ಲದೆ, ಎಸ್ಸಿಪಿ, ಟಿಎಸ್ಪಿ ಕಾಯ್ದೆಯ ಅನ್ವಯ ಈ ರೀತಿಯ ಅವ್ಯವಹಾರಗಳು ನಡೆದ ಸಂದರ್ಭದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶವಿಲ್ಲ. ಸರಕಾರವೇ ದೂರು ಸಲ್ಲಿಸಬೇಕಿದೆ. ಇದು ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ತಳಸಮುದಾಯದ ಹೆಸರಿನಲ್ಲಿ ತಿಂದು ತೇಗಲು ರಹದಾರಿ ಕಲ್ಪಿಸಿದಂತಾಗಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ.
ತುಮಕೂರು: 200ರ ಗಡಿ ದಾಟಿದ ಡೆಂಗ್ಯೂ ಪ್ರಕರಣ: ಸಹಾಯವಾಣಿ ಆರಂಭ
ಸಮಾಜವಾದಿ, ಅಹಿಂದ ಎಂಬ ಸೈದ್ದಾಂತಿಕ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಸೇರಿದಂತೆ ಹಿಂದುಳಿದ ಸಮುದಾಯಗಳು ಬೆಂಬಲ ವ್ಯಕ್ತ ಪಡಿಸಿದ್ದು ನಿಜ. ಇದು ಸರಕಾರದ ನೀಚ ಆಡಳಿತದ ಪರಮಾವಧಿಯಾಗಿದೆ. ಸಿದ್ದರಾಮಯ್ಯನವರ ಅಹಿಂದ ಹೋರಾಟ ಬೆತ್ತಲಾಗಿದೆ. ತಳಸಮುದಾಯಕ್ಕೆ ಕೊಟ್ಟಂತೆ ಮಾಡಿ ಅಧಿಕಾರಿಗಳು, ರಾಜಕಾರಣಿಗಳು ಲೂಟಿ ಹೊಡೆಯುತಿದ್ದಾರೆ. ರಾಜ್ಯದಲ್ಲಿ ಸುಮಾರು 30ಕ್ಕೂ ಹೆಚ್ಚು ಶಾಸಕರಿದ್ದರಿದ್ದರೂ ಅವ್ಯವಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷದಲ್ಲಿ ಶೇ.25 ರಷ್ಟು ಅಭಿವೃದ್ಧಿ ಸಾಧಿಸಿಲ್ಲ ಎಂದು ಚಳವಳಿ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 22 ರಂದು ನಡೆಯುವ ಹೋರಾಟದಲ್ಲಿ ಎಸ್ಟಿ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ರಾಜಣ್ಣ ಮನವಿ ಮಾಡಿದರು.
ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಯುವ ಸೇನೆಯ ಕುಪ್ಪೂರು ಶ್ರೀಧರ್ ಮೂರ್ತಿ, ಮಾದಿಗ ದಂಡೋರದ ಆಟೋ ಶಿವರಾಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು.
+ There are no comments
Add yours