ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ; ಅರ್ಜಿ ಸಲ್ಲಿಸಲು ಅವಕಾಶ

1 min read

 

Tumkurnews
ತುಮಕೂರು; ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ 2022-23ನೇ ಸಾಲಿನ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವರ್ಗಾವಣೆ ಅರ್ಜಿಯನ್ನು ಇ.ಇ.ಡಿ.ಎಸ್.ನಲ್ಲಿ ಸಲ್ಲಿಸಲು ಜನವರಿ 25ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಗಾವಣೆ ಸಂಬಂಧಿತ ವಿಚಾರ, ಸಮಸ್ಯೆಗಳು, ಶಿಕ್ಷಕರು ಅಪೇಕ್ಷಿಸುವ ಮಾಹಿತಿಗಾಗಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಸಂಬಂಧಿಸಿದ ಶಿಕ್ಷಕರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ. ಶಿಕ್ಷಕರು ನಿಗದಿತ ಅವಧಿಯೊಳಗೆ ಇ.ಇ.ಡಿ.ಎಸ್ ಮುಖಾಂತರವೇ ಆಕ್ಷೇಪಣೆಗಳನ್ನು ಬಗೆಹರಿಸಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗಳಾದ ತುಮಕೂರು-7624941501/ 9480695360, ಚಿ.ನಾ.ಹಳ್ಳಿ-9480695352, ಗುಬ್ಬಿ-9480695353, ಕುಣಿಗಲ್-9480695355, ತಿಪಟೂರು-9480695359, ತುರುವೇಕೆರೆ-9480695361ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

You May Also Like

More From Author

+ There are no comments

Add yours