ಜೂಜು ಅಡ್ಡೆ ಮೇಲೆ ದಾಳಿ; 6 ಬೈಕ್ ಸೇರಿ ಆರೋಪಿಗಳು ಪೊಲೀಸ್ ವಶಕ್ಕೆ

1 min read

 

ಇಸ್ಪೀಟು ಅಡ್ಡೆ ಮೇಲೆ ದಾಳಿ; 10,140 ರೂ. ನಗದು ವಶ

Tumkurnews
ತುಮಕೂರು; ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಪಣಕ್ಕೆ ಇರಿಸಿದ್ದ, 10,140 ರೂ.ನಗದು ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಸಿದ್ದರಾಜು ಎಂಬುವರ ಜಮೀನಿನ ಬಳಿ ಆರೇಳು ಜನರು ಸೇರಿಕೊಂಡು ಇಸ್ಪೀಟು ಆಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ 8 ಮೊಬೈಲ್ ಪೋನ್, 6 ದ್ವಿಚಕ್ರ ವಾಹನ, 52 ಇಸ್ಪೀಟು ಕಾರ್ಡ್ಸ್, 1 ಪ್ಲಾಸ್ಟಿಕ್ ಪೇಪರ್ ನ್ನು ವಶಪಡಿಸಿಕೊಳ್ಳುವಲ್ಲಿ ಪಿಎಸ್ಐ ಚೇತನ್ ಕುಮಾರ್.ಜಿ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.
ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸಿಪಿಐ ಸುರೇಶ್ ಕೆ ಹಾಗೂ ಪಿಎಸ್ಐ ಚೇತನ್ ಕುಮಾರ್ ಜಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಸಿಬ್ಬಂದಿ ಎಎಸ್ಐ ರಾಮಚಂದ್ರಯ್ಯ, ಧರ್ಮಪಾಲ್ ನಾಯಕ್, ಚನ್ನಮಲ್ಲಿಕಾರ್ಜುನ್, ದೊಡ್ಡಲಿಂಗಯ್ಯ, ಜಗದೀಶ್, ಮಲ್ಲೇಶ್, ದಯಾನಂದ್, ಗಣೇಶ್, ಹನುಮಂತರಾಯಪ್ಪ ಇತರರು ಪಾಲ್ಗೊಂಡಿದ್ದರು.

You May Also Like

More From Author

+ There are no comments

Add yours