ಬಸ್ ಚಾಲಕನ ಅಜಾಗರೂಕತೆ; ಪ್ರಾಣಾಪಾಯಕ್ಕೆ ಸಿಲುಕಿದ ಪ್ರಯಾಣಿಕರು
Tumkurnews
ತುಮಕೂರು; ಚಾಲಕನ ಅಜಾಗರೂಕತೆಯಿಂದಾಗಿ ಬಸ್ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡು ಪ್ರಯಾಣಿಕರು ಪ್ರಾಣಭೀತಿ ಎದುರಿಸಿದ ಘಟನೆ ನಡೆದಿದೆ.
ವಿದ್ಯುತ್ ತಂತಿ ತಗುಲಿ ಮಹಿಳೆ ಬಲಿ; ಪಾವಗಡ ಬೆಸ್ಕಾಂ ಎದುರು ಶವ ಇರಿಸಿ ಪ್ರತಿಭಟನೆ; ವಿಡಿಯೋ
ಪಾವಗಡ ತಾಲ್ಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ವೆಂಕಟಾಪುರ ಗ್ರಾಮದ ಬಳಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಅತಿ ರಭಸವಾಗಿ ನೀರು ಹರಿಯುತ್ತಿರುವುದನ್ನು ಲೆಕ್ಕಿಸದೆ ಖಾಸಗಿ ಬಸ್ ಚಾಲಕನೋರ್ವ ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ನೀರಿನಲ್ಲಿ ಸಿಲುಕಿಕೊಂಡ ಬಸ್ ಮುಂದೆ ಚಲಿಸಲಾಗದೆ ಸ್ಥಗಿತಗೊಂಡಿದೆ. ಚಾಲಕ ಎಷ್ಟೇ ಪ್ರಯತ್ನಿಸಿದರೂ ಬಸ್ ಮಾತ್ರ ಮುಂದೆ ಚಲಿಸಲೇ ಇಲ್ಲ. ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಬಸ್’ನಲ್ಲಿ ಕುಳಿಸಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಭಯಗೊಂಡಿದ್ದು, ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ಎಲ್ಲರನ್ನೂ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಬಳಿಕ ಜೆಸಿಬಿ ಬಳಸಿ ಬಸ್ ಅನ್ನು ದಡಕ್ಕೆ ತರಲಾಗಿದೆ.




+ There are no comments
Add yours