ಹೆತ್ತೇನಹಳ್ಳಿಯಲ್ಲಿ ವಿದ್ಯುತ್ ಅದಾಲತ್; ಯಾವೆಲ್ಲಾ ಗ್ರಾಮದವರು ಭಾಗವಹಿಸಬಹುದು? ಇಲ್ಲಿದೆ ಮಾಹಿತಿ

1 min read

 

Tumkurnews
ತುಮಕೂರು; ಬೆವಿಕಂ ಗ್ರಾಮೀಣ ಉಪವಿಭಾಗ-2ರ ಗೂಳೂರು ಹೋಬಳಿಯ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆತ್ತೇನಹಳ್ಳಿ ಗ್ರಾಮದಲ್ಲಿ ಆಗಸ್ಟ್ 20ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್‍ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹೆತ್ತೇನಹಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಬಹುದಾಗಿದೆ.
ಸದರಿ ದಿನಾಂಕದಂದು ಮಧ್ಯಾಹ್ನ 03 ರಿಂದ ಸಂಜೆ 5:30 ಗಂಟೆಯವರೆಗೆ ಉಪವಿಭಾಗ ಕಚೇರಿ ಹೊರಪೇಟೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಗೆ ಬೆ.ವಿ.ಕಂನ ಹೆಬ್ಬೂರು, ಗೂಳೂರು, ಸಿದ್ದಾರ್ಥನಗರ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಭೀಮಸಂದ್ರ ಮತ್ತು ಗೆದ್ದಲಹಳ್ಳಿ ನಗರದ ಹಾಗೂ ಗ್ರಾಮ ಪಂಚಾಯಿತಿಗಳಾದ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು, ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯಿತಿಗಳ ಹೆಚ್.ಟಿ ಮತ್ತುಎಲ್.ಟಿ ಗ್ರಾಹಕರುಗಳು ಸಭೆಗೆ ಹಾಜರಾಗಿ ಗ್ರಾಮೀಣ ಉಪವಿಭಾಗಕ್ಕೆ ಸಂಬಂಧಿಸಿದಂತೆ ತಮ್ಮ ಸೂಕ್ತ ಸಲಹೆ ಅಥವಾ ದೂರುಗಳಿದ್ದಲ್ಲಿ ಸಲ್ಲಿಸಿ ಸಭೆಯಲ್ಲಿ ದೂರು ಪರಿಹರಿಸಿಕೊಳ್ಳಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours