ಚಿರತೆ‌ ದಾಳಿ; 10 ಕುರಿಗಳ ಮಾರಣ ಹೋಮ

1 min read

 

Tumkur News
ತುಮಕೂರು: ಸದ್ದಿಲ್ಲದೆ ಬಂದ ಚಿರತೆ ಕುರಿ ರೊಪ್ಪದಲ್ಲಿ ಹೊಕ್ಕು ನಾಲವತ್ತು ಕುರಿಗಳ ಪೈಕಿ ಹತ್ತು ಕುರಿಗಳನ್ನು ಕೊಂದ ಘಟನೆ ತಾಲೂಕಿನ ಉರ್ಡಿಗೆರೆ ಹೋಬಳಿಯ ಗಿಡಗನಹಳ್ಳಿಯಲ್ಲಿ ನಡೆದಿದೆ.

ಅಕ್ಕ – ತಂಗಿಯ ಜಗಳ; ಆತ್ಮಹತ್ಯೆಯಲ್ಲಿ ಅಂತ್ಯ

ಬೆಳಗಿನ ಜಾವ 5:20ರ ಸುಮಾರಿಗೆ ಚಿರತೆ ದಾಳಿ ಮಾಡಿದ್ದು, ಧನಂಜಯ ಎಂಬುವವರಿಗೆ ಸೇರಿದ ಕುರಿಗಳ ದಾರುಣ ಸಾವು ಆಗಿವೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. 3 ದಿನಗಳ ಹಿಂದಷ್ಟೆ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟರು ಯಾವುದೇ ಕ್ರಮಕೈಗೊಂಡಿರಲಿಲ್ಲ. ದೇವರಾಯನದುರ್ಗದ ಕಾಡಿನ ಕಡೆಯಿಂದ ಊರಿಗೆ ನುಗ್ಗಿದೆ ಎನ್ನಲಾಗಿದೆ‌. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ರಾಜಕೀಯ ಮುಖಂಡರ ಭೇಟಿನೀಡಿ ಪರಿಶೀಲನೆ ನಡೆಸಿದರು.

About The Author

You May Also Like

More From Author

+ There are no comments

Add yours