ಜಾಹೀರಾತು ಫಲಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ; ನಿಯಮ ಮೀರಿದರೆ ಕಾನೂನು ರೀತ್ಯಾ ಕ್ರಮ!

1 min read

Tumkur News
ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಮತ್ತು ವಿದ್ಯುತ್ ಕಂಬಗಳಲ್ಲಿ, ಪಾಲಿಕೆಯ ಅನುಮತಿ ಪಡೆಯದೇ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರುಗಳನ್ನು ಒಳಗೊಂಡಿರುವ ಫ್ಲೆಕ್ಸ್, ಬ್ಯಾನರ್, ಕಟೌಟ್ಸ್, ಬಂಟಿಂಗ್ಸ್, ಜಾಹೀರಾತು ಫಲಕಗಳನ್ನು  ಸಭೆ, ಸಮಾರಂಭ, ಹುಟ್ಟುಹಬ್ಬ ಹಾಗೂ ಇನ್ನಿತರ ಕಾರಣಗಳಿಗೆ ಅಳವಡಿಸುತ್ತಿದ್ದು, ಸದರಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಮಾನವ ಬಳಕೆ ಸಂಪನ್ಮೂಲ ಬಳಕೆಯಾಗುತ್ತಿರುವುದರಿಂದ ಮತ್ತು ವಿದ್ಯುತ್ ಅವಘಡಗಳು ಹೆಚ್ಚಾಗುವ ಸಂಭವವಿರುವುದರಿಂದ ಕೆಲವು ನಿಯಮಗಳನ್ನು ಪಾಲಿಸುವಂತೆ ಪಾಲಿಕೆ ತಿಳಿಸಿದೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ

ಎಲ್ಲೆಂದೆಡೆ ಜಾಹೀರಾತುಗಳನ್ನು ಹಾಕುವುದರಿಂದ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇದೆ.
ಅನುಮತಿ ನೀಡಲಾದ ಬಟ್ಟೆ ಬ್ಯಾನರ್‌ಗಳಲ್ಲಿ ಕಾನೂನು ಬಾಹಿರವಾದ ಅಂಶಗಳನ್ನು ಬಳಸಬಾರದು ಹಾಗೂ ಕಡ್ಡಾಯವಾಗಿ ಬಟ್ಟೆ ಬ್ಯಾನರ್‌ಗಳನ್ನೇ ಅಳವಡಿಸಬೇಕು.  ಅನುಮತಿ ನೀಡಲಾದ ಬಟ್ಟೆ ಬ್ಯಾನರ್‌ಗಳನ್ನು ಹೊರತುಪಡಿಸಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವ ಬ್ಯಾನರ್ಸ್ ಅಥವಾ ಫ್ಲೆಕ್ಸ್ ಬಳಕೆ ಮಾಡಿದ್ದಲ್ಲಿ ತಕ್ಷಣವೇ ಪಾಲಿಕೆ ವತಿಯಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಅಶೋಕ್

ಯಾವುದೇ ಸಭೆ, ಸಮಾರಂಭಗಳನ್ನು ನಡೆಸುವ ೦೨ ದಿನಗಳ ಮುಂಚಿತವಾಗಿ ಬ್ಯಾನರ್‌ಗಳನ್ನು ಅಳವಡಿಸಲಾಗುವ ಸ್ಥಳಗಳ ವಿವರಗಳೊಂದಿಗೆ ಮಹಾನಗರಪಾಲಿಕೆ ಗಮನಕ್ಕೆ ತಂದು ಪಾಲಿಕೆಯಿಂದ ನಿಗಧಿಪಡಿಸಲಾದ ಮೊತ್ತವನ್ನು ಪಾವತಿಸಿ, ಅನುಮತಿ ಪಡೆದ ನಂತರವಷ್ಟೇ, ಬಟ್ಟೆ ಬ್ಯಾನರ್‌ಗಳನ್ನು ಅಳವಡಿಸಿಕೊಳ್ಳತಕ್ಕದ್ದು. ಅನುಮತಿ ನೀಡಿರುವ ಅಂತಿಮ ದಿನಾಂಕ/ಸಮಯದ ತರುವಾಯ ನೀವೇ ಸ್ವತಃ ಬಟ್ಟೆ ಬ್ಯಾನರ್‌ನ್ನು ತೆರವುಗೊಳಿಸತಕ್ಕದ್ದು, ಇಲ್ಲವಾದಲ್ಲಿ ರೂ.೧೦,೦೦೦/-ಗಳ ದಂಡ ವಿಧಿಸಲಾಗುವುದು ಹಾಗೂ ಪಾಲಿಕೆ ವತಿಯಿಂದಲೇ ತೆರವುಗೊಳಿಸಲಾಗುವುದು. ಅನುಮತಿ ನೀಡಲಾದ ಬಟ್ಟೆ ಬ್ಯಾನರ್‌ಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು ಹಾಗೂ ಅಪಾಯಕಾರಿ ಇರುವ ಯಾವುದೇ ಪ್ರಾಣಹಾನಿ ಉಂಟುಮಾಡುವಂತಹ ಕಂಬಗಳಿಗೆ/ಜಾಗಗಳಲ್ಲಿ ಅಳವಡಿಸಬಾರದು.

3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!

ಈ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿ ಆದೇಶಿಸಿದ್ದು, ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours