ಹಣಕ್ಕಾಗಿ ಕಿಡ್ನಾಪ್; ತುಮಕೂರು ಎಸ್ಪಿ ಕಚೇರಿ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನ

1 min read

Tumkurnews
ತುಮಕೂರು; ಪಡೆದ ಹಣ ವಾಪಾಸು ‌ಕೊಡಲಿಲ್ಲ ಎಂದು ಆರೋಪಿಸಿ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನನ್ನು ಅಪಹರಿಸಿ ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದಿದೆ.
ತುಮಕೂರಿನ ಗಿಣಿ ಶಾಸ್ತ್ರ ಹೇಳುವ ಉಪ್ಪಾರಹಳ್ಳಿ ನಿವಾಸಿ ಮಾರಣ್ಣ ಎಂಬಾತನ ಮೇಲೆ ಉಪ್ಪಾರಹಳ್ಳಿಯವರೇ ಆದ ಮಂಜಮ್ಮ, ಆಕೆಯ ಪುತ್ರಿ ರಮ್ಯ, ಕೀರ್ತಿ ಹಾಗೂ ಅಳಿಯ ವಿನೋದ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮಾರಣ್ಣನ ಪತ್ನಿ ಮಂಜಮ್ಮ ಮೇ 25ರಂದು ದೂರು ನೀಡಿದ್ದು, “ಮೇ 23ರಂದು ಸಪ್ತಗಿರಿ ಬಡಾವಣೆಗೆ ಪರಿಚಯಸ್ಥರ ಮನೆಗೆ ತೆರಳಿದ್ದ ಪತಿ ಮಾರಣ್ಣನಿಗೆ ಮಂಜಮ್ಮ, ರಮ್ಯ, ಕೀರ್ತಿ ಹಾಗೂ ವಿನೋದ ಎಂಬುವವರು ತೀವ್ರ ಹಲ್ಲೆ ನಡೆಸಿ, ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಮಧ್ಯಾಹ್ನ 2.30ಕ್ಕೆ ಕರೆದೊಯ್ದು ರಾತ್ರಿ 12.30ರವರೆಗೂ ತಮ್ಮ ಬಳಿ ಒತ್ತೆ ಇರಿಸಿಕೊಂಡು ಹಣಕ್ಕಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ತೀವ್ರ ಗಾಯಗೊಂಡಿದ್ದ ಪತಿ ಮಾರಣ್ಣನನ್ನು ರಾತ್ರಿ 1ಗಂಟೆ ಸಮಯದಲ್ಲಿ ಓಮಿನಿ ಕಾರಿನಲ್ಲಿ ಕರೆತಂದು ನಮ್ಮ ಮನೆಯ ಬಳಿ ಬಿಟ್ಟು ಹೋದರು. ಮೇ 24ರಂದು ತುಮಕೂರು ಜಿಲ್ಲಾಸ್ಪತ್ರೆಗೆ ಪತಿ ಮಾರಣ್ಣನನ್ನು ದಾಖಲಿಸಿದ್ದು, ಆಗ ಮಾರಣ್ಣ ಪ್ರಜ್ಞೆ ತಪ್ಪಿದ್ದರಿಂದ ವೈದ್ಯರ ಸಲಹೆ ಮೇರೆಗೆ ನಿಮಾನ್ಸ್ ಗೆ ದಾಖಲಿಸಲಾಗಿತ್ತು. ಬಳಿಕ ಪುನಃ ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಗಂಡನಿಗೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಕ್ರಮ ಜರುಗಿಸಬೇಕು” ಎಂದು ಮಾರಣ್ಣನ ಪತ್ನಿ ಮಂಜಮ್ಮ ದೂರಿನಲ್ಲಿ ಕೋರಿದ್ದಾರೆ.

ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ
ವಿಷ ಸೇವಿಸಿ ಹೈ ಡ್ರಾಮ; ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಸಂತ್ರಸ್ತರೊಂದಿಗೆ ಆರೋಪಿಗಳು ರಾಜಿಗೆ ಪ್ರಯತ್ನಿಸಿದ್ದಾರೆ. ಸಂತ್ರಸ್ತರು ರಾಜಿಗೆ ಒಪ್ಪದೇ ಇದ್ದಾಗ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ವಿರುದ್ಧವೇ ಆರೋಪಿಗಳು ಪ್ರತಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇದು ಸಾಧ್ಯವಾಗದೇ ಇದ್ದಾಗ ಆರೋಪಿ ರಮ್ಯ ವಿಷ ಸೇವಿಸುವ ನಾಟಕವಾಡಿ ಹೈಡ್ರಾಮ ಸೃಷ್ಟಿಸಿದ್ದಾಳೆ.

ಶಿರಾದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ; ಸಮಗ್ರ ವರದಿ ಓದಿ
ವಿಷ ಕುಡಿದು ಬಂದಳು; ಮೇ 27ರ ಶುಕ್ರವಾರ ಸಂಜೆ ದಿಢೀರನೆ ಎಸ್ಪಿ ಕಚೇರಿ ಎದುರು ಹಾಜರಾದ ಆರೋಪಿ ರಮ್ಯ, ಪೊಲೀಸರು ನಮ್ಮ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ, “ನಾನು ವಿಷ ಕುಡಿದಿದ್ದೇನೆ, ಸಾಯುತ್ತೇನೆ” ಎಂದು ಪೊಲೀಸರನ್ನು ಹೆದರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಹಲ್ಲೆ, ಒತ್ತೆ, ಪ್ರಾಣಬೆದರಿಕೆ ಆರೋಪ ಎದುರಿಸುತ್ತಿದ್ದ ರಮ್ಯ ಮತ್ತಾಕೆಯ ಕುಟುಂಬ ಸದಸ್ಯರು ಇದೀಗ ಪೊಲೀಸರ ತನಿಖೆಯ ಮೇಲೆ ಪ್ರಭಾವ ಬೀರಲು ದುರುದ್ದೇಶದಿಂದ ವಿಷ ಸೇವನೆಯ ಹೈಡ್ರಾಮ ಸೃಷ್ಟಿಸಿ ಮತ್ತೊಂದು ಪ್ರಕರಣ ಎದುರಿಸುವಂತಾಗಿದೆ.

(ಒಳಚಿತ್ರ; ಮಾರಣ್ಣ)

ತುಮಕೂರಿನಲ್ಲಿ ಕುರುಬರ ಜಾಗೃತಿ ಸಮಾವೇಶ; ಸಿದ್ದರಾಮಯ್ಯ ಭಾಗಿ

About The Author

You May Also Like

More From Author

+ There are no comments

Add yours