ಜಿಲ್ಲೆಯಲ್ಲಿ ಈವರೆಗೆ 12,553 ಜನರಿಗೆ ಕೋವಿಡ್ 19 ಟೆಸ್ಟ್

1 min read

ತುಮಕೂರು ನ್ಯೂಸ್.ಇನ್(ಜೂ.18)
ಜಿಲ್ಲೆಯಲ್ಲಿ ಇದುವರೆಗೂ 12,553 ಜನರನ್ನು ಕೋವಿಡ್ 19 ಟೆಸ್ಟ್‍ಗೆ ಒಳಪಡಿಸಿದ್ದು, 11,849 ಜನರ ವರದಿ ನಗೆಟಿವ್ ಬಂದಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು.
ಜಿಪಂ ಸಭಾಂಗಣದಲ್ಲಿಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ 19 ಟೆಸ್ಟ್‍ಗೆ ಒಳಪಡಿಸಿರುವ ಪೈಕಿ 576 ಜನರ ವರದಿ ಬರಬೇಕಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ರೋಗ ವ್ಯಾಪಕವಾಗಿ ಹರಡುವುದನ್ನು ತಡೆಯಲಾಗಿದೆ ಎಂದರು.
ಪ್ರಸ್ತುತ 42 ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸುಮಾರು 31 ಜನರು ಬಿಡುಗಡೆಯಾಗಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ, ಬೆಂಗಳೂರಿಗೆ ಹತ್ತಿರವಿರುವ ತುಮಕೂರು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಕಡಿಮೆ ಇದೆ. ಇದಕ್ಕಾಗಿ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷರಾದ ಚೌಡಪ್ಪ ನುಡಿದರು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಮಂಜುಳ, ಗಾಯಿತ್ರಿಬಾಯಿ, ಜಗನ್ನಾಥ್, ತಿಮ್ಮಯ್ಯ, ರಾಮಕೃಷ್ಣ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours