ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸರು; ಹಿಂದೂ ಕಾರ್ಯಕರ್ತರ ವಿರೋಧ

1 min read

 

Tumkurnews
ತುಮಕೂರು; ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಳವಡಿಸಿದ್ದ ವಿ‌.ಡಿ ಸಾವರ್ಕರ್ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಹಿಂದೂ ಏಕತಾ ಗಣೇಶೋತ್ಸವ ಅಂಗವಾಗಿ ವಿ.ಎಚ್.ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಜಯನಗರದ ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಗುರುವಾರ ರಾತ್ರಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅನುಮತಿ ಇಲ್ಲದೇ ಫ್ಲೆಕ್ಸ್ ಅಳವಡಿಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಫ್ಲೆಕ್ಸ್ ತೆರವುಗೊಳಿಸಿದರು.

ಈ ವೇಳೆ ಭಜರಂಗದಳ ಸಂಚಾಲಕ ಮಂಜುಭಾರ್ಗವ್, ಫ್ಲೆಕ್ಸ್ ಅಳವಡಿಸಲು ಈಗಾಗಲೇ ಪಾಲಿಕೆಗೆ ಅನುಮತಿ ಕೋರಿ ಪತ್ರ ನೀಡಲಾಗಿದೆ. ಆದರೆ ಇನ್ನೂ ‌ಅನುಮತಿ ಸಿಕ್ಕಿಲ್ಲ. ಸಾವರ್ಕರ್ ಫ್ಲೆಕ್ಸ್ ತೆರವು ಮಾಡುವುದಾದರೆ ಅನುಮತಿ ಇಲ್ಲದೇ ಕಟ್ಟಿರುವ ಇತರೆ ಫ್ಲೆಕ್ಸ್’ಗಳನ್ನು ಕೂಡ ತೆರವುಗೊಳಿಸಬೇಕು ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

You May Also Like

More From Author

+ There are no comments

Add yours