ತುಮಕೂರು ಬಸ್ ನಿಲ್ದಾಣದವರೆಗೂ ಬರುತ್ತೆ ಮೆಟ್ರೋ ರೈಲು!: ಇಲ್ಲಿದೆ ವರದಿ

1 min read

 

 

 

 

 

Tumkurnews
ಬೆಂಗಳೂರು: ತುಮಕೂರು ವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆಯ ಯೋಜನೆಯು ಪ್ರಗತಿ ಹಂತದಲ್ಲಿದ್ದು, ಸರ್ಕಾರವು ಕಾರ್ಯಸಾಧ್ಯತಾ ವರದಿಯನ್ನು ‌ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಅದರ ಬೆನ್ನಲ್ಲೇ ಬೆಂಗಳೂರು-ತುಮಕೂರು ಮಾರ್ಗದಲ್ಲಿ 52.41 ಕಿ.ಮೀ. ಅಂತರದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಎಲ್ಲೆಲ್ಲಿ ನಿಲ್ದಾಣ ಇರುತ್ತದೆ ಎಂಬ ವರದಿ ಸಿದ್ಧವಾಗಿದೆ.
ಬಸ್ ನಿಲ್ದಾಣದವರೆಗೂ‌ ಮೆಟ್ರೋ!: ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನ ಮಾದಾವರದಿಂದ ತುಮಕೂರು ಬಸ್ ನಿಲ್ದಾಣದ ವರೆಗೂ ಮೆಟ್ರೋ ರೈಲು ಬರುವ ಸಾಧ್ಯತೆ ಇದೆ. ಎಲ್ಲೆಲ್ಲಿ ನಿಲ್ದಾಣವನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಸಾಧ್ಯತಾ ನಿಲ್ದಾಣಗಳು:
1) ಮಾದಾವರ
2) ಮಾಕಳಿ
3) ದಾಸನಪುರ
4) ನೆಲಮಂಗಲ
5) ನೆಲಮಂಗಲ ಬಸ್‌ ನಿಲ್ದಾಣ
6) ನೆಲಮಂಗಲ ರಾ.ಹೆ. ಕೊನೆ
7) ಬೂದಿಹಾಳ
8) ಟಿ.ಬೇಗೂರು
9) ಕುಲುವನಹಳ್ಳಿ
10) ಸೋಂಪುರ ಕೈಗಾರಿಕಾ ಪ್ರದೇಶ
11) ದಾಬಸ್‌ಪೇಟೆ
12) ನಲ್ಲಯ್ಯನಪಾಳ್ಯ
13) ಚಿಕ್ಕಹಳ್ಳಿ
14) ಹಿರೇಹಳ್ಳಿ
15) ಪಂಡಿತನಹಳ್ಳಿ
16) ಕ್ಯಾತ್ಸಂದ್ರ
17) ಬಟವಾಡಿ
18) ತುಮಕೂರು ವಿಶ್ವ ವಿದ್ಯಾನಿಲಯ
19) ತುಮಕೂರು ಬಸ್ ನಿಲ್ದಾಣ

You May Also Like

More From Author

+ There are no comments

Add yours