ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ದಿ ಪ್ರಾಧಿಕಾರಕ್ಕೆ ವಿರೋಧ

1 min read

 

 

 

 

 

ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ದಿ ಪ್ರಾಧಿಕಾರಕ್ಕೆ ವಿರೋಧ

ಮೈಸೂರು: ಸರ್ಕಾರದ ಪ್ರಸ್ತಾಪಿತ ಮೈಸೂರು ಚಾಮುಂಡಿ ಬೆಟ್ಟದ ಅಭಿವೃದ್ದಿ ಪ್ರಾಧಿಕಾರಕ್ಕೆ ವಿರೋಧವಿದೆ ಎಂದು ಗಂಧದಗುಡಿ ಫೌಂಡೇಶನ್’ನ ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ ತಿಳಿಸಿದ್ದಾರೆ.
ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ದಿಯು ಒಳ್ಳೆಯದೇ ಆದರೆ ಚಾಮುಂಡಿ ಬೆಟ್ಟವು ಒಂದು ಲಕ್ಷ ಹಿಂದಿನ ಬೌಗೊಳಿಕವಾಗಿ ಎರಡು ಜಾತಿಯ ಕಲ್ಲುಗಳಿಂದ ನಿರ್ಮಾಣವಾಗಿದೆ ಹಾಗೂ ಯಾವುದೇ ತರಹದ ಕಾಂಕ್ರೀಟ್ ಕಟ್ಟಡಗಳನ್ನು ತಡೆಯುವ ಸಾಂದ್ರತೆ ಇಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ ಕೆಲವು ವರ್ಷಗಳ ಹಿಂದೆ ಬೆಟ್ಟವು ಎರಡು ಬಾರಿ ಕುಸಿದಿರುವುದನ್ನು ಗಮನಿಸಿದ್ದೇವೆ ಅದಕ್ಕೆ ಸಾಕ್ಷಿಯಾಗಿ ಈಗಲೂ ಸಹ ತಡೆಗೋಡೆ ನಿರ್ಮಿಸಲಾಗುತ್ತಿದೆ.

ಕಾಂಕ್ರೀಟೀಕರಣ ನಿರ್ಮಾಣವಾಗುವುದರಿಂದ ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟವನ್ನು ಮರೆತು ಚಾಮುಂಡಿ ತಾಯಿಯನ್ನು ಗೌರವಿತವಾಗಿ ನಾವು ಮೈಸೂರಿನಲ್ಲಿ ಪ್ರತಿಷ್ಟಾಪಿಸ ಬೇಕಾಗುತ್ತದೆ. ನಮ್ಮ ನಾಡಿನಲ್ಲಿ ಈ ತರಹದ ಬೆಟ್ಟಗಳು ಇರುವುದು ವಿಶೇಷ. ನಮ್ಮ ಚಾಮುಂಡಿ ತಾಯಿಯನ್ನು ಬೆಟ್ಟದ ಮೇಲೆ ನೋಡಲು ಹಲವಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈಗಾಗಲೇ ಹಲವಾರು ಕಟ್ಟಡಗಳು ಬೆಟ್ಟದ ಮೇಲೆ ಇರುವುದನ್ನು ನಾವು ಕಂಡಿದ್ದೇವೆ. ಅದಲ್ಲದೆ ಮುಂದಿನ ದಿನಗಳಲ್ಲಿ ಯಾವುದೇ ಟೂರಿಸಂ ಅಭಿವೃದ್ದಿ ಮಾಡಲು ಸಹ ಬೆಟ್ಟದ ಕೆಳಗೆ ಮಾಡುವುದು ಉತ್ತಮ.

ಬೆಟ್ಟವು ಕೇವಲ ಭಕ್ತಾದಿಗಳು ದರ್ಶನ ಪಡೆಯಲು ಹೋಗುವ ದಾರಿಯಾಗಿ ಇಡುವುದು ಒಳ್ಳೆಯದು ಹೊರತು ಇದು ಯಾವುದೋ ವಾಣಿಜ್ಯಮಯವಾಗಿ ನೋಡಿದರೆ ಅದು ಕೇವಲ ಮ್ಯಪಾರಿ ಕೇಂದ್ರವಾಗುತ್ತದೆ ಹೊರತು ಭಕ್ತಿ ಕೆಂದ್ರ ಆಗುವುದಿಲ್ಲ. ಈ ಎಲ್ಲಾ ವಿಷಯವನ್ನು ಸರ್ಕಾರವು ತಮ್ಮ ಮನಸಿನಲ್ಲಿ ಇಟ್ಟುಕೊಂಡು ಪ್ರಾಧಿಕಾರವನ್ನು ಮಾಡುವುದು ಉತ್ತಮ.

ತುಮಕೂರು: ಸೂರ್ಯೋದಯಕ್ಕೂ ಮುನ್ನವೇ ಜಿಲ್ಲಾಧಿಕಾರಿ ಹಾಜರ್! ಮನಸೋತ ಜನ
ಈ ಪ್ರಾಧಿಕಾರವನ್ನು ಮಾಡುವ ಮೊದಲು ಚಾಮುಂಡಿ ಬೆಟ್ಟದ ಬಗ್ಗೆ ಭೌಗೊಳಿಕವಾಗಿ ತಿಳಿದುಕೊಂಡಿರುವ ಹಿರಿಯರನ್ನು ಗೂಡಿಸಿ ಸಭೆಯನ್ನು ಮಾಡಿ ಈ ಕೆಲಸ ಮಾಡುವುದು ಉತ್ತಮ. ಬರೀ ಸರ್ಕಾರದ ಇಲಾಖೆಯವರು ಇದ್ದರೆ ಪ್ರಯೋಜನವಿಲ್ಲ. ಈ ಅಭಿವೃದ್ಧಿಯ ಪ್ರಾಧಿಕಾರವು ಭಕ್ತಾದಿಗಳಿಗೆ ಬೇಸರ ತಂದಿದೆ.

ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊಬ್ಬರಿ ಖರೀದಿಸಲು ಆದೇಶ
ಮೈಸೂರು ರಾಜ ವಂಶರಿಗೆ ಸದಸ್ಯತ್ವವನ್ನು ಕೊಡುತ್ತಿರುವುದು ಬಹಳ ಸಂತೋಷದ ವಿಷಯ ಮತ್ತು ಸ್ವಾಗತಾರ್ಹ ಅದರ ಜೊತೆಗೆ ಸಾರ್ವಜನಿಕರ ಅಭಿಪ್ರಾಯಗಳು ಬಹಳ ಮುಖ್ಯವಾಗುತ್ತದೆ. ಅಲ್ಲದೆ ಚಾಮುಂಡಿ ಬೆಟ್ಟವು ಹಲವು ಜೀವ ವೈವಿದ್ಯತೆಗಳನ್ನು ಹೊಂದಿರುವ ಒಂದು ಕೇಂದ್ರ ಹಾಗು ಅರಣ್ಯ ಮೀಸಲು ಸ್ಥಳ. ಅಲ್ಲಿ ಕಾಂಕ್ರೀಟೀಕರಣ ಮಾಡುವುದರಿಂದ ಜೀವ ವೈವಿದ್ಯತೆಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲ.

ಈಗ ಬೆಟ್ಟದ ಮೇಲೆ ನಡೆಯುತ್ತಿರುವ ವ್ಯಾಪಾರದಿಂದ ಹಲವು ಪ್ಲಾಸ್ಟಿಕ್ ಕಸವು ತುಂಬಿಕೊಂಡಿದೆ ಈತರ ಆಗುತ್ತಿರುವಾಗ ಪ್ರಕೃತಿಯು ಕಾಳ್ಗಿಚ್ಚು ಸಂಭವಿಸಿದಾಗ ಈ ಪ್ಲಾಸ್ಟಿಕ್ ವಸ್ತುಗಳು ಪೆಟ್ರೋಲಿಯಂ ತರಹ ಕೆಲಸ ಮಾಡಿ ಸಣ್ಣ ಮಟ್ಟದಲ್ಲಿ ಆಗಬೇಕಿದ್ದ ಅವಘಡಗಳು ದೊಡ್ಡ ಮಟ್ಟದಲ್ಲಿ ಆಗುತ್ತದೆ. ಪ್ರತಿವರ್ಷವೂ ಸಹ ಅರಣ್ಯಾಧಿಕಾರಿಗಳು ಮತ್ತು ಸಾರ್ವಜನಿಕರು ಕಾಡನ್ನು ಸ್ವಚ್ಛ ಮಾಡುವುದೇ ಕೆಲಸವಾಗಿ ಬಿಟ್ಟಿದೆ. ಅದನ್ನು ಮಾಡುವುದರ ಬದಲು ಬೆಟ್ಟದ ಮೇಲೆ ಪ್ಲಾಸ್ಟಿಕ್ ಮುಕ್ತಾಯ ಮಾಡಿದರೆ ಒಳ್ಳೆಯದು.

ಈಗ ಸರ್ಕಾರವು ಕೊಟ್ಟಿರುವ ಹೇಳಿಕೆಯು ನೋಡಿದರೆ ಆಸ್ಪತ್ರೆಯನ್ನು ಕಟ್ಟುವುದು, ಹಾಲಿನ ಕೇಂದ್ರ ಮುಂತಾದ ಪ್ರಾಧಿಕಾರವು ಬೆಟ್ಟಕ್ಕೆ ಅನಾಹುತವನ್ನು ಆಹ್ವಾನ ಮಾಡಿಕೊಟ್ಟಂತೆ ಆಗುತ್ತದೆ. ಅದರ ಬದಲು ಈಗ ಇರುವ ಕಟ್ಟಡದಲ್ಲೆ ಪ್ರಾಥಮಿಕ ಆರೋಗ್ಯ ಕೆಂದ್ರಗಳನ್ನು ಮಾಡಿ ಅನುಕೂಲವಾಗಿ ಉಪಯೋಗಿಸಿಕೊಳ್ಳಲಿ. ಯಾವುದೇ ಪ್ರಕೃತಿ ಸ್ವನಿರ್ಮಿತ ಬೆಟ್ಟಗಳನ್ನು ನಾವೇ ಹಾಳುಮಾಡಿದರೆ ಮತ್ತೆ ಕಟ್ಟಲು ಸಾಧ್ಯವಿಲ್ಲ ಎಂದು ಗಂಧದಗುಡಿ ಫೌಂಡೇಶನ್’ನ ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ, ಸದಸ್ಯರುಗಳಾದ ಯಶೋದಾ.ಆರ್, ಲಾವಣ್ಯ, ಮನು ಗೋಪಾಲ್, ಹಾಗೂ ಮೈಸೂರು ಮೀಮ್ಸ್ ನ ರವಿ ಕೀರ್ತಿ ತಿಳಿಸಿದ್ದಾರೆ.

 

You May Also Like

More From Author

+ There are no comments

Add yours