ತುಮಕೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ

1 min read

 

 

 

 

 

ಅಪರಿಚಿತ ವ್ಯಕ್ತಿ ಶವ ಪತ್ತೆ
Tumkurnews
ತುಮಕೂರು: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಊರುಕೆರೆ ಬೋವಿಪಾಳ್ಯದ ರೈಲ್ವೆ ಇಲಾಖೆಗೆ ಗುತ್ತಿಗೆ ನೀಡಲಾಗಿರುವ ಜಮೀನಿನಲ್ಲಿ ಕಾರ್ಮಿಕರು ವಾಸಿಸುತ್ತಿರುವ ಶೆಡ್ ಪಕ್ಕದಲ್ಲಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತನು ಸುಮಾರು 165 ಸೆ.ಮೀ. ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ಮೈಮೇಲೆ ಕಪ್ಪು ಬಣ್ಣದ ಟೀ-ಷರ್ಟ್ ಹಾಗೂ ಕಾಫಿ ಬಣ್ಣದ ನೈಟ್ ಪ್ಯಾಂಟ್ ಇರುತ್ತದೆ. ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದ ಶೀತಲಪೆಟ್ಟಿಗೆಯಲ್ಲಿ ಇರಿಸಲಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಸಂಪರ್ಕಿಸುವಂತೆ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

ಗಾಂಜಾ ಇದೆ ಎಂದು ಭಿಕ್ಷುಕನ ಬ್ಯಾಗ್ ಚೆಕ್ ಮಾಡಿದ ಪೊಲೀಸರಿಗೆ ಕಾದಿತ್ತು‌ ಶಾಕ್! ಬೆಚ್ಚಿ ಬಿದ್ದ ಜನ: ವಿಡಿಯೋ

You May Also Like

More From Author

+ There are no comments

Add yours