ದೇವರಾಯನದುರ್ಗದಲ್ಲಿ ಅಪರೂಪದ ಬೇಟೆಯಾಡಿದ ಚಿರತೆ: ಕ್ಯಾಮೆರಾದಲ್ಲಿ ಸೆರೆ

1 min read

 

 

 

 

 

ದೇವರಾಯನದುರ್ಗದಲ್ಲಿ ಅಪರೂಪದ ಬೇಟೆಯಾಡಿದ ಚಿರತೆ: ಕ್ಯಾಮೆರಾದಲ್ಲಿ ಸೆರೆ

Tumkurnews
ತುಮಕೂರು: ಚಿರತೆಗಳ ಅಧ್ಯಯನಕ್ಕಾಗಿ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಚಿರತೆಯೊಂದು ದೊಡ್ಡ ಬಾವಲಿಯನ್ನು ಬೇಟೆಯಾಡಿರುವ ದೃಶ್ಯ ಸೆರೆಯಾಗಿದೆ.
ಹೊಳೆಮತ್ತಿ ನೇಚರ್‌ ಫೌಂಡೇಶನ್‌ ಹಾಗೂ ನೇಚರ್ ಕನ್ಸರ್ವೇಷನ್ ಫೌಂಡೇಶನ್‌ನ ಸಂಜಯ್ ಗುಬ್ಬಿ ಮತ್ತು ತಂಡದವರು ಅಳವಡಿಸಿದ್ದ ಕ್ಯಾಮೆರಾದಲ್ಲಿ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಚಿರತೆಯೊಂದು ಬಾವಲಿಯನ್ನು ಬಾಯಲ್ಲಿ ಕಚ್ಚಿ ಹಿಡಿದಿರುವ ಚಿತ್ರ ಸೆರೆಯಾಗಿದೆ.
ಅಪರೂಪದ ಬೇಟೆ: ಚಿರತೆಗಳು ಸಾಮಾನ್ಯವಾಗಿ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತವೆ. ಆದರೆ, ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿನ ಈ ಚಿರತೆಯು ದೊಡ್ಡ ಬಾವಲಿಯನ್ನು ಬೇಟಿಯಾಡಿದೆ. ಇದು ಅಪರೂಪದ ಬೇಟೆಯಾಗಿದ್ದು, ಇಂತಹ ಅಪರೂಪದ ದೃಶ್ಯ ಇದೇ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಇಂಡಿಯನ್ ಫೈಯಿಂಗ್ ಫಾಕ್ಸ್’ (ಹಾಲಕ್ಕಿ) ಎಂದು ಕರೆಲಾಗುವ ಈ ದೊಡ್ಡ ಬಾವಲಿಗಳು 1.5 ಕೆ.ಜಿಯಷ್ಟು ತೂಕವಿರುತ್ತವೆ. ರಕ್ಕೆಗಳನ್ನು ಹರಡಿದರೆ ಐದು ಅಡಿಗಳಷ್ಟಾಗುತ್ತದೆ.
ಚಿರತೆಗಳು ಸಾಮಾನ್ಯವಾಗಿ ಕಡವೆ, ಸಾರಂಗ, ಕಾಡು ಹಂದಿ, ಕುರಿ, ಮೇಕೆ, ನಾಯಿ, ಮುಳ್ಳುಹಂದಿ, ಮೊಲ, ಚಿಪ್ಪು ಹಂದಿಯಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಹೆಗ್ಗಣ, ಉಡ, ಮೀನಿನಂತಹ ಆಸಕ್ತಿದಾಯಕ ಪ್ರಾಣಿಗಳು ಸಹ ಅವುಗಳ ಆಹಾರದ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ, ಬಾವಲಿ ಬೇಟೆಯಾಡಿರುವ ಅಪರೂಪದ ಸಂಗತಿ.
ಆಹಾರದ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ, ಬಾವಲಿ ಬೇಟೆಯಾಡಿರುವ ಅಪರೂಪದ ಸಂಗತಿ. ಬಹುಶಃ ಮೊದಲ ಬಾರಿಗೆ ಪತ್ತೆಯಾಗಿದೆ’ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಹೇಳುತ್ತಾರೆ.

ಬಿಜೆಪಿ ಜನ್ಮ ಜಾಲಾಡಿದ ಸಿದ್ದರಾಮಯ್ಯ: ಹಿಗ್ಗಾಮುಗ್ಗಾ ತರಾಟೆ

You May Also Like

More From Author

+ There are no comments

Add yours