ಐಟಿ ದಾಳಿಯ 40 ಕೋಟಿಗೂ ಬೆಮೆಲ್ ಕಾಂತರಾಜುಗೂ ಏನು ಸಂಬಂಧ?: ಬೆಮೆಲ್ ಕಾಂತರಾಜು ಹೇಳಿದ್ದೇನು?

1 min read

 

 

 

 

 

ಐಟಿ ದಾಳಿಯ 40 ಕೋಟಿಗೂ ಬೆಮೆಲ್ ಕಾಂತರಾಜುಗೂ ಏನು ಸಂಬಂಧ?: ಬೆಮೆಲ್ ಕಾಂತರಾಜು ಹೇಳಿದ್ದೇನು?

Tumkurnews
ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದನ್ನು ಬೆಮೆಲ್ ಕಾಂತರಾಜು ತಳ್ಳಿ ಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‌ನನ್ನ ಮೇಲೆ ಯಾವುದೇ ಐ.ಟಿ ದಾಳಿ ನಡೆದಿಲ್ಲ. ಯಾವುದೇ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುತ್ತಿಗೆದಾರರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಕೋಟ್ಯಂತರ ರೂ.ಗಳಿಗೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ. ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ 40 ಕೋಟಿ ಹಣದೊಂದಿಗೆ ಬೆಮೆಲ್ ಕಾಂತರಾಜು ಹೆಸರು ತಳಕು ಹಾಕಿಕೊಂಡಿತ್ತು. ತಮ್ಮ ಕುರಿತು ಯಾವುದೇ ವರದಿಯನ್ನು ಪ್ರಸಾರ ಮಾಡದಂತೆ ಕೂಡ ಬೆಮೆಲ್ ಕಾಂತರಾಜು ಮನವಿ ಮಾಡಿದ್ದಾರೆ.

ತುಮಕೂರು ಮೂಲದ ಯೋಧ ಚಂಡಿಗಡದಲ್ಲಿ ನಿಧನ

You May Also Like

More From Author

+ There are no comments

Add yours