ತುಮಕೂರು ಮೂಲದ ಯೋಧ ಚಂಡಿಗಡದಲ್ಲಿ ನಿಧನ

1 min read

ತುಮಕೂರಿನ ಯೋಧ ಚಂಡಿಗಡದಲ್ಲಿ ನಿಧನ

Tumkurnews
ತುಮಕೂರು: ಪಂಜಾಬ್’ನ ಪಠಾಣ್ ಕೋಟ್’ನಲ್ಲಿ ಬಿಎಸ್ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಪಾವಗಡ ತಾಲೂಕಿನ ಬಿಎಸ್ಎಫ್ ಯೋಧ ಎಸ್.ಜಿ ಸುರೇಶ್ ಕುಮಾರ್(36) ಚಂಡಿಗಡದಲ್ಲಿ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ನಿವಾಸಿಯಾಗಿದ್ದ ಎಸ್.ಜಿ ಸುರೇಶ್ ಕುಮಾರ್ ಪಂಜಾಬ್’ನ ಪಠಾಣ್ ಕೋಟ್’ನಲ್ಲಿ ಬಿಎಸ್ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಮಾಹಿತಿ
ಎಸ್.ಜಿ ಸುರೇಶ್ ಕುಮಾರ್ ಪಾವಗಡ ತಾಲೂಕಿನ ಜಯರಾಮರೆಡ್ಡಿ ಹಾಗೂ ಸುನಂದಮ್ಮ ದಂಪತಿಯ ಹಿರಿಯ ಪುತ್ರ. ಮೃತರು ಇಬ್ಬರು ಮಕ್ಕಳು, ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕಿಡ್ನಿ ವೈಫಲ್ಯ: ಸುರೇಶ್ ಕುಮಾರ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಂಡಿಗಡದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ನಿಧನರಾಗಿದ್ದಾರೆ.

ವಿದ್ಯಾರ್ಥಿನಿಗೆ ಐ ಲವ್ ಯೂ ಎಂದು ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ
ತಿಂಗಳ ಹಿಂದಷ್ಟೇ ಬಂದಿದ್ದರು: ಸುರೇಶ್ ಕುಮಾರ್ ಅವರು ಕಳೆದ ಒಂದು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಪತ್ನಿಗೆ ಎರಡನೇ ಮಗುವಿನ ಹೆರಿಗೆಗೆ ಬಂದು, ಹೆರಿಗೆ ಮುಗಿಸಿ ವಾಪಸ್ ಆಗಿದ್ದರು. ಮೃತರ ಪಾರ್ಥೀವ ಶರೀರ ಇಂದು ಮಧ್ಯರಾತ್ರಿ ಸ್ವಗ್ರಾಮಕ್ಕೆ ಬರಲಿದೆ.
ಕರ್ತವ್ಯದ ನಿಮಿತ್ತ ಬಂದಿದ್ದರು: ಸುರೇಶ್ ಕುಮಾರ್, ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭದ್ರತೆಗೆ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮಕ್ಕೆ ಬಂದಿದ್ದರು. ನಾಳೆ ಸ್ವಗ್ರಾಮದಲ್ಲಿ ಸುರೇಶ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ತುಮಕೂರು ಪಾಲಿಕೆ ಇಂಜಿನಿಯರ್ ವನಿತಾ ನಿಧನ

You May Also Like

More From Author

+ There are no comments

Add yours