ರಾಮಾಯಣಕ್ಕೂ ತುಮಕೂರಿಗೂ ಉಂಟು ನಂಟು! ಈ ಬಗ್ಗೆ ನಿಮಗೆಷ್ಟು ಗೊತ್ತು?

1 min read

 

 

 

 

 

ರಾಮಾಯಣಕ್ಕೂ ತುಮಕೂರಿಗೂ ಉಂಟು ನಂಟು! ನಿಮಗಿದು ಗೊತ್ತೇ?

Tumkurnews
ತುಮಕೂರು: ರಾಮಾಯಣಕ್ಕೂ ತುಮಕೂರಿಗೂ ನಂಟು ಇದೆ! ಹೌದು ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆ ತುಮಕೂರಿನ ಒಂದು ಸ್ಥಳದಲ್ಲಿ ವಿಶ್ರಾಂತಿ ಪಡೆದಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಶ್ರೀರಾಮನು ಸೀತೆ ಮತ್ತು ಲಕ್ಷ್ಮಣ ಸಹಿತವಾಗಿ ವಿಶ್ರಾಂತಿ ಪಡೆದ ಸ್ಥಳ ತುಮಕೂರಿನ ನಾಮದ ಚಿಲುಮೆ. ಇಲ್ಲಿ ವನವಾಸ ಕಳೆದಿದ್ದರು. ತುಮಕೂರು ಜಿಲ್ಲೆ ಅಮೂಲ್ಯವಾದ ಸ್ಥಳವಾಗಿದೆ. ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ಕೆಲ ಕಾಲ ಇಲ್ಲಿನ ದೇವರಾಯನದುರ್ಗ ಕಾಡಿನಲ್ಲಿ ವನವಾಸ ಕಳೆದಿದ್ದರು ಎಂಬುದು ಪುರಾಣದಲ್ಲಿದೆ.


ವನವಾಸದ ನಿಮಿತ್ತ ದೇವರಾಯನದುರ್ಗ ಕಾಡಿಗೆ ಬಂದಿದ್ದ ಶ್ರೀರಾಮನಿಗೆ ಹಣೆಗೆ ತಿಲಕವಿಡುವ ಸಂದರ್ಭ ಬಂದಿತು. ನೀರಿಗಾಗಿ ಸುತ್ತಲೂ ನೋಡಿದರೂ ಎಲ್ಲಿಯೂ ನೀರು ಸಿಗಲೇ ಇಲ್ಲ. ಆಗ ತಾನಿದ್ದ ಆ ಸ್ಥಳದಲ್ಲೇ ಬಾಣ ಹೂಡಿ ಒಂದು ಬಂಡೆಯ ಮೇಲೆ ಬಿಟ್ಟಾಗ, ಬಾಣ ಒಳಹೊಕ್ಕು ರಂಧ್ರವನ್ನು ಕೊರೆದು ಅಲ್ಲಿ ನೀರಿನ ಬುಗ್ಗೆ ಚಿಮ್ಮಿತು. ಆ ನೀರನ್ನು ತೆಗೆದುಕೊಂಡು ರಾಮ ತನ್ನ ಹಣೆಗೆ ನಾಮವನ್ನು ಧರಿಸಿದರು ಎನ್ನಲಾಗಿದೆ. ಹಾಗಾಗಿ ಈ ಚಿಲುಮೆಗೆ ನಾಮದ ಚಿಲುಮೆ ಎಂಬ ಹೆಸರು ಬಂದಿದೆ.
ಎಂತಹ ಕಡು ಬೇಸಿಗೆಯಲ್ಲೂ ಇಲ್ಲಿ ನೀರು ಚಿಮ್ಮುತ್ತಲೇ ಇರುವುದು ವಿಶೇಷ. ನಾಮದ ಚಿಲುಮೆಯಲ್ಲಿ ಒಂದು ಸಣ್ಣ ಮೃಗಾಲಯವಿದ್ದು ಅದರಲ್ಲಿ ಜಿಂಕೆ, ಕವಡೆ ಇತ್ಯಾದಿ ಪ್ರಾಣಿಗಳಿವೆ. ತಂಪಾದ ಗಾಳಿ, ಉತ್ತಮ ಮರಗಳು, ಕೊತಿಗಳು, ಬಣ್ಣ ಬಣ್ಣದ ಪಕ್ಷಿಗಳಿರುವ ಈ ಸ್ಥಳವು ವಾರಾಂತ್ಯ ಕಳೆಯಲು ಉತ್ತಮ ಸ್ಠಳವಾಗಿದೆ.
ತುಮಕೂರಿನ ರೈಲು ನಿಲ್ದಾಣ ಇಲ್ಲಿದೆ ಹತ್ತಿರವಿದೆ. ದೇವರಾಯದುರ್ಗಕ್ಕೆ ತುಮಕೂರು ಮತ್ತು ಬೆಂಗಳೂರುನಿಂದ ಸುಲುಭವಾಗಿ ಬಸ್ಸುಗಳಿವೆ. ನೀವಿನ್ನು ನಾಮದ ಚಿಲುಮೆ ನೋಡಿಲ್ಲವಾದರೆ ಒಮ್ಮೆ ಭೇಟಿ ನೀಡಿ.

ಚಿತ್ರ: ಚಿಲುಮೆ ಸ್ಥಳ

You May Also Like

More From Author

+ There are no comments

Add yours