ಸಿದ್ದರಾಮಯ್ಯರ ತಂಟೆಗೆ ಬಂದ್ರೆ ರಾಜ್ಯ ಹೊತ್ತಿ ಉರಿಯುತ್ತೆ; ಕೆ.ಎನ್ ರಾಜಣ್ಣ ಎಚ್ಚರಿಕೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣವನ್ನು ಮಾಜಿ ಶಾಸಕ ಕೆ.ಎನ್ ರಾಜಣ್ಣ ಖಂಡಿಸಿದ್ದು, ಸಿದ್ದರಾಮಯ್ಯ ತಂಟೆಗೆ ಬಂದರೆ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಸಂತ್ರಸ್ಥರನ್ನು ವಿಚಾರಿಸಲು ಸಿದ್ದರಾಮಯ್ಯ ಹೋಗಿದ್ದರು. ಬಡವರ, ನಿರಾಶ್ರಿತರ ಪರವಾಗಿ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ರಾಜಕೀಯ ದುರುದ್ದೇಶವನ್ನಿಟ್ಟುಕೊಂಡು ಮೊಟ್ಟೆ ಎಸೆದಿರುವುದು ಅನಾಗರೀಕ ವರ್ತನೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಕ್ಷಮ್ಯ ಅಪರಾಧ; ಟಿ.ಬಿ ಜಯಚಂದ್ರ ಖಂಡನೆ
ಅಲ್ಲೆಲ್ಲೋ ಊರಲ್ಲಿ 50 ಜನ ಇರಬಹುದು. ಆದರೆ ಸಿದ್ದರಾಮಯ್ಯನವರ ತಂಟೆಗೆ ಬಂದರೆ ರಾಜ್ಯವೇ ಉರಿದು ಹೋಗಲಿದೆ. ಹೀಗೆಯೇ ಮುಂದುವರೆದರೆ ಬಿಜೆಪಿಯವರು ಕಾರ್ಯಕ್ರಮಗಳನ್ನು ಮಾಡಲು ಕೂಡ ನಾವು ಬಿಡುವುದಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಸುಮ್ಮನಿದ್ದೇವೆ ಎಂದರು.
ಈ ಘಟನೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಬಿಜೆಪಿಯಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ. ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರು ಇದೇ ತಿಂಗಳ 26 ರಂದು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ನಾವು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಎಂದು ತಿಳಿಸಿದರು.

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ
ಘಟನೆ ವಿಚಾರವಾಗಿ ಭದ್ರತಾ ಲೋಪವಾಗಿದೆ, ಇದನ್ನು ಸರ್ಕಾರ ಒಪ್ಪಿಕೊಂಡಿದೆ. ಮೊದಲೇ ಭದ್ರತೆ ಏಕೆ ಕೊಡಬಾರದಿತ್ತು ಎನ್ನುವುದು ನಮ್ಮ ಪ್ರಶ್ನೆ, ಪ್ರವಾಸ ಹೋಗುವ ಬಗ್ಗೆ ಮೊದಲೇ ಮಾಹಿತಿ ನೀಡಿರುತ್ತಾರೆ.
ಮಾಹಿತಿ ಕೊಟ್ಟ ಮೇಲೆ ಪೊಲೀಸರು ಭದ್ರತೆ ಮಾಡಿ ನಿವಾರಣೆ ಮಾಡಬೇಕಿತ್ತು. ಆಗಾಗಿ ಭದ್ರತಾ ಲೋಪ ಮತ್ತು ಗುಪ್ತಚರ ಇಲಾಖೆ ಫೇಲ್ ಆಗಿದೆ. ಇಲ್ಲದಿದ್ದರೆ ಉದ್ದೇಶ ಪೂರ್ವಕವಾಗಿ ಸರ್ಕಾರ ಮಾಡಿಸಿದೆಯೇ ಗೊತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಯಾರೇ ವಿರೋಧ ಪಕ್ಷದವರು ಬಂದರೂ ಸರಕಾರ ಭದ್ರತೆ ಒದಗಿಸುವುದು ಆದ್ಯ ಕರ್ತವ್ಯ. ಜನರ ಪರವಾಗಿ ಹೋರಾಡಿರುವ ಮುಖಂಡ ಸಿದ್ದರಾಮಯ್ಯ. ಅವರ ಮೇಲಿನ ಹಲ್ಲೆ ತಳ ಸಮುದಾಯದ ಮೇಲಾಗಿರುವ ಹಲ್ಲೆ ಎಂದು ಖಂಡಿಸುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

About The Author

You May Also Like

More From Author

+ There are no comments

Add yours