ಸಾವರ್ಕರ್ ಫ್ಲೆಕ್ಸ್’ಗೆ ಹಾನಿ; ಕೇಸ್ ದಾಖಲು, ಶಾಂತಿ ಕಾಪಾಡುವಂತೆ ಎಸ್.ಪಿ ಮನವಿ

1 min read

 

Tumkurnews
ತುಮಕೂರು; ನಗರದಲ್ಲಿ ವಿ.ಡಿ‌ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳ ಕೃತ್ಯದಿಂದ ಜನತೆ ಪ್ರಚೋದನೆಗೆ ಒಳಗಾಗಬಾರದು ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮನವಿ ಮಾಡಿದ್ದಾರೆ.
ಈ‌ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಎಂಪ್ರೆಸ್ ಕಾಲೇಜು ಎದುರು ಫ್ಲೆಕ್ಸ್’ಗಳನ್ನು ಹಾಕಲಾಗಿತ್ತು. ಈ ಪೈಕಿ ಸಾವರ್ಕರ್ ಅವರ ಭಾವಚಿತ್ರವಿರುವ ಫ್ಲೆಕ್ಸ್ ಒಂದರಲ್ಲಿ ಸಾವರ್ಕರ್ ಫೋಟೋವನ್ನು ಯಾರೋ ಕಿಡಿಗೇಡಿಗಳು ಕತ್ತರಿಸಿದ್ದಾರೆ. ಇಂದು ಬೆಳಗ್ಗೆ ನಮಗೆ ಈ ಬಗ್ಗೆ ಮಾಹಿತಿ ಬಂದಿದೆ. ಈ ಫ್ಲೆಕ್ಸ್’ಗಳನ್ನು ನಿನ್ನೆ ಪಾಲಿಕೆಯವರು ತೆರವು ಮಾಡಿದ್ದು, ಇಂದು ಬೆಳಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ.

ತುಮಕೂರು; ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು
ಕಿಡಿಗೇಡಿಗಳು ಜನರನ್ನು ಪ್ರಚೋದಿಸಲು ಈ ಕೃತ್ಯವನ್ನು ಎಸಗಿದ್ದಾರೆ. ಇದಕ್ಕೆ ಜನರು ಪ್ರಚೋದನೆಗೊಂಡು ಪ್ರತಿಕ್ರಿಯೆ ನೀಡಿದರೆ ಅವರ ಉದ್ದೇಶ ಈಡೇರುತ್ತದೆ. ಹಾಗಾಗಬಾರದು. ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯಾರು ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜನರು ಶಾಂತಿಯುತವಾಗಿರಬೇಕು, ಯಾವುದೇ ತರಹರ ಪ್ರಚೋದನೆಗೆ ಒಳಗಾಗಬಾರದು, ಜನರ ನಿರೀಕ್ಷೆಯಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಸಾವರ್ಕರ್ ಫ್ಲೆಕ್ಸ್’ಗೆ ಹಾನಿ ಪ್ರಕರಣ; ಎಸ್.ಪಿ ಹೇಳಿದ್ದೇನು? ವಿಡಿಯೋ

About The Author

You May Also Like

More From Author

+ There are no comments

Add yours