ಸ್ವಾತಂತ್ರ್ಯ ಅಮೃತ ಮಹೋತ್ಸವ; ತುಮಕೂರಿನಲ್ಲಿ 3 ಸಾವಿರ ವಿದ್ಯಾರ್ಥಿಗಳಿಂದ ವಾಕಥಾನ್

1 min read

 

Tumkurnews
ತುಮಕೂರು; 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಬೃಹತ್ ವಾಕಥಾನ್ ನಡೆಸಲಾಯಿತು.
ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯಿಂದ ಆಯೋಜಿಸಲಾಗಿದ್ದ ಈ ವಾಕಥಾನ್ ನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ಸಂಭ್ರಮಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಆರಂಭಗೊಂಡ ದೇಶಕ್ಕಾಗಿ ಮಹಾನಡಿಗೆ ಹೆಸರಿನ ವಾಕಥಾನ್ ಟೌನ್ ಹಾಲ್ ವೃತ್ತ, ಸ್ವಾತಂತ್ರ್ಯ ಚೌಕ ಮಾರ್ಗವಾಗಿ ಅಮಾನಿಕೆರೆ ಗಾಜಿನಮನೆಯಲ್ಲಿ ಸಮಾವೇಶಗೊಂಡಿತು. ವಾಕಥಾನ್ ‌ನಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಮತ್ತಿತರರು ಭಾಗವಹಿಸಿದ್ದರು.

ಮಕ್ಕಳಿಗೆ ಚಿತ್ರಕಲೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆ; ಇಂದೇ ನೋಂದಾಯಿಸಿ

You May Also Like

More From Author

+ There are no comments

Add yours