ಮಳೆ ಆರ್ಭಟಕ್ಕೆ ತುಮಕೂರಿನಲ್ಲಿ ಮತ್ತೊಂದು ಬಲಿ; ಪಾಲಿಕೆ ವಿರುದ್ಧ ಜನಾಕ್ರೋಶ

1 min read

 

Tumkurnews
ತುಮಕೂರು; ನಗರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಶನಿವಾರ ರಾತ್ರಿ‌ ಸುರಿದ ಭಾರಿ ಮಳೆಗೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಜನರು ತೀವ್ರ ಪರದಾಟ ಅನುಭವಿಸುವಂತಾಯಿತು‌. ನಜರಾಬಾದ್, ಸದಾಶಿವನಗರ, ಅಮಾನಿಕೆರೆ, ಎಸ್ ಮಾಲ್ ಮತ್ತಿತರ ಕಡೆಗಳಲ್ಲಿ ನೀರು ಹೊರ ಹಾಕಲು ಸಾಧ್ಯವಾಗದೇ ಟಿವಿ, ಸೋಫಾ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳು ನೀರು ಪಾಲಾದವು. ಬೆಳಗ್ಗೆಯಾದರೂ ಮನೆಗಳಿಗೆ ನುಗ್ಗಿದ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ‌‌. ಹೀಗಾಗಿ ಜನರು ತೀವ್ರ ಸಮಸ್ಯೆ ಅನುಭವಿಸುವಂತಾಯಿತು.

ವೃದ್ದ ಸಾವು; ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವೃದ್ದರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಕ್ಯಾತ್ಸಂದ್ರದಲ್ಲಿ ಬೈಕ್-ಲಾರಿ ಅಪಘಾತ; ಯುವಕ ಸ್ಥಳದಲ್ಲೇ ಸಾವು
ನಗರದ ಶಿವಮೂಕಾಂಬಿಕ ನಗರ ಉಪ್ಪಾರಹಳ್ಳಿ ನಿವಾಸಿ ಕೆ.ಸಿ ವೀರಣ್ಣ(75) ಮೃತ ದುರ್ದೈವಿ. ಇತ್ತೀಚೆಗಷ್ಟೇ ಆಟೊ ಚಾಲಕ ಅಮ್ಜದ್ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಆ ನೆನಪು ಮಾಸುವ ಮುನ್ನವೇ ಮಳೆ ಅವಾಂತರಕ್ಕೆ ನಗರದಲ್ಲಿ ಮತ್ತೊಂದು ಬಲಿಯಾಗಿದೆ‌. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ‌ ನೀಡಿದ್ದು, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಪಾಲಿಕೆ ವಿರುದ್ಧ ಆಕ್ರೋಶ; ಮಳೆ ಅವಾಂತರಗಳನ್ನು ಎದುರಿಸಲು ಮಹಾನಗರ ಪಾಲಿಕೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಹೀಗಾಗಿ ಜನರು ಜೀವ, ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

(ಮಳೆ ನೀರು ಮನೆಗಳಿಗೆ ನುಗ್ಗಿರುವ ದೃಶ್ಯ)

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕಿತ್ತು, ಮಳೆ ಅನಾಹುತಗಳನ್ನು‌ ನಿಭಾಯಿಸಲು ತಂಡ, ಸಹಾಯವಾಣಿ ರಚಿಸಬೇಕಿತ್ತು. ಇದ್ಯಾವುದನ್ನೂ ಪಾಲಿಕೆ ಮಾಡಿರಲಿಲ್ಲ. ಹೀಗಾಗಿ ಜನರು ತೊಂದರೆಗಳನ್ನು ಅನುಭವಿಸಬೇಕಾಯಿತು ಎಂದು ಸಂತ್ರಸ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

(ಚಿತ್ರ; ತುಮಕೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಜನರು ಮನೆಯಿಂದ ಹೊರಗೆ ನಿಂತಿರುವ ದೃಶ್ಯ)

ಐಸಿಸ್ ಉಗ್ರರೊಂದಿಗೆ ನಂಟು; ತುಮಕೂರಿನಲ್ಲಿ NIA ದಾಳಿ, ವಿದ್ಯಾರ್ಥಿ ವಶಕ್ಕೆ

About The Author

You May Also Like

More From Author

+ There are no comments

Add yours