Tumkur News
ತುಮಕೂರು: ನಾನು ಸರಿಯಾಗಿಯೇ ಬ್ಯಾಲೆಟ್ ಪೇಪರ್ ನ ತೋರಿಸಿದ್ದೇನೆ. ಮೂರ್ನಾಲ್ಕು ನಿಮಿಷ ಪೇರಪರ್ ಹಿಡಿದು, ನಂತರ ವೋಟ್ ಮಾಡಿದ್ದೇನೆ. ಹೆಬ್ಬೆಟ್ಟು ಅಡ್ಡ ಇದ್ದರೆ, ಹೆಬ್ಬೆಟ್ಟು ತೆಗಿ ಅನ್ನಬಹುದಿತ್ತು. ಆಗ ಅವನೇನು ಕತ್ತೆ ಕಾಯುತಿದ್ನಾ? ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಕುಮಾರಸ್ವಾಮಿಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೊಗ್ಯತೆ ಇಲ್ಲ: ಎಸ್.ಆರ್. ಶ್ರೀನಿವಾಸ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಬಿಜೆಪಿ ವಿರೋಧಿಯಾಗಿದ್ದೇನೆ. ಹೀಗಿರುವಾಗ ಬಿಜೆಪಿಗೆ ಮತ ಹಾಕುತ್ತೇನೆಯೇ? ನಾನು ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ದೇನೆ. ಆದರೂ ಕುಮಾರಸ್ವಾಮಿ ಮತ್ತು ರೇವಣ್ಣ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದರು.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ನನ್ನನ್ನು ಉತ್ತಮನಲ್ಲ ಎಂದು ಹೇಳುವ ಕುಮಾರಸ್ವಾಮಿ, ಅವನು ಉತ್ತಮನಾ? ಅವನು ಯಾವುದರಲ್ಲಿ ಉತ್ತಮ? ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ಇವನಿಗೆ ನಾನು ಹೆದರಿಕೊಳ್ಳಬೇಕಾ? ನನ್ನ ವಿರುದ್ಧ ಅಭ್ಯರ್ಥಿ ಹಾಕಿದ ಮೇಲೆ ಹೆದರುವುದೇನಿದೆ? ಇನ್ನೊಂದು ಜನ್ಮ ಎತ್ತಿದ್ರೂ ಇವನ ಪಕ್ಷ ಬಹುಮತ ಬರಲ್ಲ ಎಂದು ಟೀಕಿಸಿದರು.
+ There are no comments
Add yours