ತುಮಕೂರು ಪಾಲಿಕೆಯ 2022-23ನೇ ಸಾಲಿನ ಬಜೆಟ್ ಮಂಡನೆ; ಇಲ್ಲಿದೆ ಸಂಪೂರ್ಣ ವಿವರ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ಆರೋಗ್ಯ, ಬೀದಿ ದೀಪ ವ್ಯವಸ್ಥೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಮೂಲಕ ಸ್ವಚ್ಛ ಮತ್ತು ಹಸಿರು ತುಮಕೂರು ನಿರ್ಮಾಣಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಉತ್ತಮ ಸಾರಿಗೆ, ಸಿಸಿ ಟಿವಿ ಅಳವಡಿಕೆ, ಕ್ರೀಡಾಂಗಣ ಅಭಿವೃದ್ಧಿ, ಗ್ಯಾಸ್‍ಲೈನ್ ಜೋಡಣೆ ಮುಂತಾದ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಗತಿಯಲ್ಲಿರುತ್ತವೆ ಎಂದು ತುಮಕೂರು ಮಹಾನಗರಪಾಲಿಕೆ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಳಿನ ಇಂದ್ರಕುಮಾರ್ ಅವರು ತಿಳಿಸಿದರು.
ಅವರಿಂದು ತುಮಕೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ಆಯವ್ಯಯ ಅಂದಾಜು(ಬಜೆಟ್) ಮಂಡಿಸಿ ಮಾತನಾಡಿದರು. ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಆಯವ್ಯಯ ಅಂದಾಜು ತಯಾರಿಸಿದ್ದು, ಒಟ್ಟು ರೂ. 415.94ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ. 2022-23ನೇ ಸಾಲಿಗೆ ತುಮಕೂರು ಮಹಾನಗರಪಾಲಿಕೆಯಲ್ಲಿ ಒಟ್ಟು ರೂ. 20811.15 ಲಕ್ಷಗಳ ಒಟ್ಟು ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ವಂತ ಸಂಪನ್ಮೂಲ ರೂ. 7266.15 ಲಕ್ಷಗಳು ಹಾಗೂ ಸರ್ಕಾರದ ಅನುದಾನಗಳಿಂದ 13545.00ಲಕ್ಷ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಆಸ್ತಿ ತೆರಿಗೆಯಿಂದ 4000 ಲಕ್ಷ, ದಂಡದ ರೂಪದಲ್ಲಿ 300ಲಕ್ಷ, ಆಸ್ತಿ ಹಕ್ಕು ಬದಲಾವಣೆ 75ಲಕ್ಷ, ಘನತ್ಯಾಜ್ಯ ಉಪಕರ 300ಲಕ್ಷ, ಜಾಹೀರಾತು ತೆರಿಗೆ 15ಲಕ್ಷ, ಅಧಿಬಾರ ಶುಲ್ಕ 50ಲಕ್ಷ, ಉದ್ದಿಮೆ ಪರವಾನಿಗೆ 200 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ 100ಲಕ್ಷ, ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕ 60 ಲಕ್ಷ, ಕೆರೆಗಳ ಪುನರುಜ್ಜೀವನ ಶುಲ್ಕ 25ಲಕ್ಷ, ಕುಡಿಯುವ ನೀರಿನ ಶುಲ್ಕ 1200ಲಕ್ಷ, ಒಳಚರಂಡಿ ಶುಲ್ಕ 100ಲಕ್ಷ, ಒಳಚರಂಡಿ ಹೊಸ ಸಂಪರ್ಕ 150 ಲಕ್ಷ, ಒಳಚರಂಡಿ ಸಕ್ರಮ 25 ಲಕ್ಷ, ಅಂಗಡಿ ಕಟ್ಟಡಗಳ ಬಾಡಿಗೆ 200 ಲಕ್ಷ, ವಾಹನ ನಿಲುಗಡೆ ಶುಲ್ಕ 15ಲಕ್ಷ, ಬಸ್ ನಿಲುವಳಿ ಶುಲ್ಕ 5 ಲಕ್ಷ, ರಸ್ತೆ ಕಡಿತ ಶುಲ್ಕ 100ಲಕ್ಷ ಮತ್ತು ಮಾರುಕಟ್ಟೆ ಶುಲ್ಕಗಳಿಂದ ಪ್ರಸಕ್ತ ಸಾಲಿನಲ್ಲಿ ಪಾಲಿಕೆಗೆ 10 ಲಕ್ಷ, ಬ್ಯಾಂಕುಗಳಿಂದ ಬಡ್ಡಿ 100 ಲಕ್ಷ, ಇತರೆ ಸ್ವೀಕೃತಿಗಳು 126.15ಲಕ್ಷ ಸೇರಿದಂತೆ ಒಟ್ಟು ರೂ. 7266.15ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.
ನಿರೀಕ್ಷಿತ ವೆಚ್ಚಗಳು; ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಭತ್ಯೆಗಾಗಿ 1875ಲಕ್ಷ, ವಾಹನ ಇತ್ಯಾದಿ ವೆಚ್ಚ 195ಲಕ್ಷ, ಹೊರಗುತ್ತಿಗೆ ಮಾನವ ಸಂಪನ್ಮೂಲ 100ಲಕ್ಷ, ಗಣಕೀಕೃತ ಮತ್ತು ಕಾಗದರಹಿತ ಕಚೇರಿ 60 ಲಕ್ಷ, ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 20.25ಲಕ್ಷ, ರಾಷ್ಟ್ರೀಯ ಹಬ್ಬ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 45ಲಕ್ಷ, ಪ್ರಕೃತಿ ವಿಕೋಪ, ಆಕಸ್ಮಿಕ ಸಹಾಯಧನಕ್ಕೆ 50ಲಕ್ಷ, ವಿಪತ್ತು ನಿರ್ವಹಣಾ ತಂಡಕ್ಕೆ 10ಲಕ್ಷ, ವಕೀಲರ ಶುಲ್ಕ 120ಲಕ್ಷ, ವಾರ್ಡ್ ಕಮಿಟಿ ರಚನೆ 14ಲಕ್ಷ, ಕೌನ್ಸಿಲ್ ಶಾಖೆಗಾಗಿ 780ಲಕ್ಷ, ಪಾಲಿಕೆಯ ಸದಸ್ಯರ ಅಧ್ಯಯನ ಪ್ರವಾಸಕ್ಕೆ 30ಲಕ್ಷ ರೂ. ಮೀಸಲಿಡಲಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ನಿರ್ವಹಣೆ 40ಲಕ್ಷ, ಜನಗಣತಿ 65ಲಕ್ಷ, ಮಹಾಪೌರರು ಮತ್ತು ಉಪಮಹಾಪೌರರ ವಿವೇಚನಾ ಅನುದಾನ 150ಲಕ್ಷ, ರಸ್ತೆ ಮತ್ತು ಚರಂಡಿ ನಿರ್ವಹಣೆ, ವೃತ್ತಗಳ ಅಭಿವೃದ್ಧಿಗೆ 4671ಲಕ್ಷ, ಭೂಸ್ವಾಧೀನಕ್ಕಾಗಿ 1000ಲಕ್ಷ, ಸಾರ್ವಜನಿಕ ಬೀದಿ ದೀಪ ವ್ಯವಸ್ಥೆಗಾಗಿ 1632ಲಕ್ಷ, ಸಾರ್ವಜನಿಕ ಆರೋಗ್ಯಕ್ಕಾಗಿ 104ಲಕ್ಷ, ಸಮುದಾಯ ಶೌಚಾಲಯ ನಿರ್ಮಾಣ ನಿರ್ವಹಣೆಗಾಗಿ 100ಲಕ್ಷ, ವೈಯಕ್ತಿಕ ಶೌಚಾಲಯ 50 ಲಕ್ಷ, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷನ್ 5ಲಕ್ಷ ಮತ್ತು ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ 200ಲಕ್ಷ, ಕಾರ್ಮಿಕರು ಹಾಗೂ ಪತ್ರಕರ್ತರಿಗೆ ಆರೋಗ್ಯ ಕೇಂದ್ರ ಸ್ಥಾಪನೆಗಾಗಿ 20ಲಕ್ಷ, ಸಾರ್ವಜನಿಕ ಸ್ಮಶಾನ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 250ಲಕ್ಷ, ವೈಜ್ಞಾನಿಕ ಕಸ ವಿಲೇವಾರಿ 3862ಲಕ್ಷ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಗಾಗಿ 100ಲಕ್ಷ, ನೀರು ಸರಬರಾಜಿಗಾಗಿ 3562ಲಕ್ಷ ರೂ. ಮೀಸಲಿಡಲಾಗಿದೆ. ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆ 765ಲಕ್ಷ, ಉದ್ಯಾನವನ ನಿರ್ವಹಣೆಗಾಗಿ 480ಲಕ್ಷ, ಸಾರ್ವಜನಿಕ ಮೂಲಭೂತ ಆಸ್ತಿ ನಿರ್ವಹಣೆಗಾಗಿ 1225ಲಕ್ಷ, ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗಾಗಿ 294.24ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 88.52ಲಕ್ಷ, ದಿವ್ಯಾಂಗ ಚೇತನರಿಗೆ 61.05ಲಕ್ಷ, ಕ್ರೀಡಾ ಚಟುವಟಿಕೆಗಳಿಗೆ 7.63ಲಕ್ಷ, ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನಕ್ಕಾಗಿ ಒಟ್ಟು 75ಲಕ್ಷ, ಅಂಗನವಾಡಿ ಕೇಂದ್ರ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ 25ಲಕ್ಷ ಕಾಯ್ದಿರಿಸಲಾಗಿದೆ. 2022-23ನೇ ಸಾಲಿನ ಆಯ-ವ್ಯಯದಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ ಆರ್ಥಿಕ ಇತಿ ಮಿತಿಗೆ ಒಳಪಟ್ಟು ಕ್ರಿಯಾ ಯೋಜನೆಯನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಮೇಯರ್ ಬಿ.ಜಿ ಕೃಷ್ಣಪ್ಪ, ಶಾಸಕ ಜಿ.ಬಿ ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours