ತುಮಕೂರು, (ಜೂ.21) tumkurnews.in:
ಭಾರತದ ವಿರುದ್ಧ ಚೀನಾ ಕಾಲು ಕೆರೆದು ಕ್ಯಾತೆ ತೆಗೆಯುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಚೀನಾದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಭಾರತೀಯರು ಚೀನಾದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತುಮಕೂರಿನ ಯುವಕನೋರ್ವ ಚೀನಾ ಬೆಂಬಲಿಸಿ, ಭಾರತೀಯ ಸೈನಿಕರನ್ನು ನಿಂದಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಆರೋಪ ಕೇಳಿ ಬಂದಿದೆ. ಚೀನಾ ಬೆಂಬಲಿಸುವ ಪೋಸ್ಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ajaykumar gaali ಎಂಬಾತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಿರಾ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ. ಆದರೆ ajaykumar gaali ತಮ್ಮ ಫೇಸ್ ಬುಕ್ ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಯಾರೋ ಫೋಟೋ ಶಾಪ್ ಮಾಡಿ ತಮ್ಮ ಹೆಸರಿನಲ್ಲಿ ಪೋಸ್ಟ್ ಹರಿಯ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಅಜಯ್ ಕುಮಾರ್ ಗಾಳಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ವಿರುದ್ಧ ಆಗಾಗ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಈ ಫೋಟೋ ಶಾಪ್ ಕೃತ್ಯ ನಡೆಸಿದ್ದಾರೆಂದು ದೂರಿದ್ದಾರೆ. ಒಟ್ಟಿನಲ್ಲಿ ಈ ರೀತಿಯಲ್ಲಿ ಕಿಡಿಗೇಡಿ ಕೃತ್ಯ ಯಾರೇ ಮಾಡಿದ್ದರೂ ಅವರಿಗೆ ತಕ್ಕ ಪಾಠ ಕಲಿಸಿ, ದೇಶಪ್ರೇಮದ ಪಾಠವನ್ನು ಪೊಲೀಸರು ಮಾಡಬೇಕಿದೆ.
+ There are no comments
Add yours