ತುಮಕೂರು: ಫೆ.2 ರಿಂದ ಮಧ್ಯಂತರ ವಿದ್ಯುತ್ ವ್ಯತ್ಯಯ
Tumkur news
ತುಮಕೂರು: ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಫೆಬ್ರವರಿ 2 ರಿಂದ 12ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ 2ರಂದು ಕೆಎಐಡಿಬಿ ಕೈಗಾರಿಕಾ ಪ್ರದೇಶ, ಫೆ. 3ರಂದು ಕೈಗಾರಿಕಾ ಪ್ರದೇಶ, ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ಫೆ.4ರಂದು ಕೈಗಾರಿಕಾ ಪ್ರದೇಶ, ಫೆ. 5ರಂದು ಕೈಗಾರಿಕಾ ಪ್ರದೇಶ, ಫೆ.6ರಂದು ಸತ್ಯಮಂಗಲ, ಕೈಗಾರಿಕಾ ಪ್ರದೇಶ, ಫೆ.8ರಂದು ಕೈಗಾರಿಕಾ ಪ್ರದೇಶ, ಫೆ.9ರಂದು ಕೈಗಾರಿಕಾ ಪ್ರದೇಶ, ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ಫೆ.10ರಂದು ಕೈಗಾರಿಕಾ ಪ್ರದೇಶ, ಫೆ.11ರಂದು ಕೈಗಾರಿಕಾ ಪ್ರದೇಶ, ಫೆ.12ರಂದು ಕೆಎಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಮನವಿ ಮಾಡಿದ್ದಾರೆ.
+ There are no comments
Add yours