ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

1 min read

 

ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

Tumakurunews
ತುಮಕೂರು: ಅಪರೇಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ 6 ತಿಂಗಳ ಫ್ಯಾಷನ್ ಡಿಸೈನರ್ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 12ನೇ ತರಗತಿ ಪಾಸಾಗಿರಬೇಕು, 18 ರಿಂದ 35 ವರ್ಷದ ವಯೋಮಾನದವರಾಗಿದ್ದು, ತುಮಕೂರು ಜಿಲ್ಲೆಯ ನಿವಾಸಿಯಾಗಿರಬೇಕು.
ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಎ.ಟಿ.ಡಿ.ಸಿ., ತುಮಕೂರು, ಸಿದ್ದರಾಮಣ್ಣ ಹಾಸ್ಟೆಲ್ ಕಾಂಪೌಂಡ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು, ತುಮಕೂರು ಇಲ್ಲಿ ಖುದ್ದು ಹಾಜರಾಗಿ ಸೆಪ್ಟೆಂಬರ್ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816-2251618, ಮೊ.ಸಂ. 9844077096ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

You May Also Like

More From Author

+ There are no comments

Add yours