ಕೋಕಾ ಕೋಲಾ ಕಂಪನಿಯ ಗುಟ್ಟು ರಟ್ಟು ಮಾಡಿದ ಬಿ.ಸುರೇಶ್ ಗೌಡ!
Tumkurnews.in
ತುಮಕೂರು; ಜಗತ್ತಿನ ಖ್ಯಾತ ತಂಪು ಪಾನೀಯವಾದ ಕೋಕಾ ಕೋಲಾ ಕಂಪನಿಯ ಯಶಸ್ಸಿನ ಗುಟ್ಟೇನು ಎಂಬುದನ್ನು ಶಾಸಕ ಬಿ.ಸುರೇಶ್ ಗೌಡ ಬಹಿರಂಗ ಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಿಂದ ಬಿದರನಕಟ್ಟೆ ಕ್ಯಾಂಪಸ್’ನಲ್ಲಿ ಆಯೋಜಿಸಿದ್ದ ಐಸಿರಿ 2023ರ ಎ ಟೈಂ ಫಾರ್ ಡಿಸ್ಕವರಿ ಅಂಡ್ ಇನ್ನೋವೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಕೋ ಕೋಲಾ ಕಂಪನಿಯ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟರು.
ಕೋಕಾ ಕೋಲಾ ಕಂಪನಿಯು ಮೊದಲು 100 ಲೀಟರ್, 1000 ಲೀಟರ್ ಇರುವ ಬ್ಯಾರಲ್ ಇರುವ ಡ್ರಮ್’ಗಳಲ್ಲಿ ಮಾರಾಟ ಮಾಡುತ್ತಿತ್ತು. ಈ ಡ್ರಮ್ಗಳ ಸಾಗಾಟ, ಶೇಖರಣೆ, ದಾಸ್ತಾನು ಮಾಡುವಂಥದ್ದು ಬಹಳ ದೊಡ್ಡ ಪ್ರಮಾಣದಲ್ಲಿ ಕಂಪನಿಗೆ ಸವಾಲು ಆಗಿತ್ತು. ಮಾರಾಟದ ಪ್ರಮಾಣವೂ ಕೂಡ ಕಡಿಮೆಯಾಗಿತ್ತು. ಹೀಗಿರುವಾಗ ಒಬ್ಬ ವ್ಯಕ್ತಿ ಕಂಪನಿಗೆ ಐದಾರು ಬಾರಿ ಪತ್ರ ಬರೆಯುತ್ತಾನೆ. ನಿಮ್ಮ ಉತ್ಪನ್ನದ ಮಾರಾಟದ ಪ್ರಮಾಣ ಹೆಚ್ಚು ಮಾಡಲು ನನ್ನ ಬಳಿ ಒಂದು ಐಡಿಯಾ ಇದೆ, ಇದಕ್ಕೆ ಅವಕಾಶ ಕೊಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಸಮ್ಮತಿಸಿದ ಕಂಪನಿಯು ಅವನನ್ನು ಕರೆಸಿ ಅವನ ಐಡಿಯಾಲಜಿ ಏನು ಎಂಬುದನ್ನು ತಿಳಿದುಕೊಳ್ಳುತ್ತದೆ. ಆಗ 100 ಲೀಟರ್, 500 ಲೀಟರ್ ಬದಲಿಗೆ ಒಂದು ಲೀಟರ್’ನಲ್ಲಿ ಪ್ಯಾಕ್ ಮಾಡುವಂತೆ ಅವನು ಸಲಹೆ ನೀಡುತ್ತಾನೆ. ಈ ಸಲಹೆಯನ್ನು ಸ್ವೀಕರಿಸಿದ ಕಂಪನಿಯು ಒಂದು ಲೀಟರ್ ಮೂಲಕ ಮಾರಾಟ ಮಾಡಲು ಪ್ರಯತ್ನಿಸುತ್ತದೆ. ಇದರಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ. ಹೀಗೆ ನಾವೆಲ್ಲರೂ ಕೂಡ ಸೃಜನಶೀಲತೆಯನ್ನು ಸೃಷ್ಟಿಸಿಕೊಂಡಾಗ ನಮ್ಮ ಮೌಲ್ಯಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ತಮ್ಮನ್ನು ತಾವು ರೂಡಿಸಿಕೊಳ್ಳಬೇಕು ಎಂದು ಸುರೇಶ್ ಗೌಡ ಸಲಹೆ ನೀಡಿದರು.
ಇನ್ಮುಂದೆ ವಾರದಲ್ಲಿ 2 ದಿನ ಬ್ಯಾಂಕ್ ರಜೆ?!; ಏನಿದು ಸುದ್ದಿ?
ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
                                
                        
+ There are no comments
Add yours