ಪಶುಪಾಲನಾ ತರಬೇತಿ
Tumkurnews
ತುಮಕೂರು; ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ರೈತರಿಗೆ ವಿವಿಧ ಪಶುಪಾಲನೆಗೆ ಸಂಬಂಧಿಸಿದಂತೆ ಉಚಿತ ತರಬೇತಿ ನೀಡಲಾಗುವುದು.
ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಫೆಬ್ರವರಿ 3 ಮತ್ತು 4ರಂದು 2 ದಿನಗಳ ಕಾಲ 25 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿಗೆ ಹಾಜರಾಗಲಿಚ್ಛಿಸುವವರು 2 ಪಾಸ್ಪೋರ್ಟ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು.
ಆಸಕ್ತ ರೈತರು ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು ಇಲ್ಲಿ ತರಬೇತಿಗಾಗಿ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ದೂ.ವಾ.ಸಂ. 0816-2251214ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours