ಬೆಂಗಳೂರು: ಅಪಘಾತ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ.ಸಲೀಂ ಆದೇಶ ಮಾಡಿದ್ದಾರೆ.
ಈವರೆಗೆ ಅಪಘಾತ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳು ವರ್ಷಗಟ್ಟಲೆ ಪೊಲೀಸ್ ಠಾಣೆಯಲ್ಲೇ ತುಕ್ಕು ಹಿಡಿಯುತ್ತಿದ್ದವು. ಇದರಿಂದಾಗಿ ಪೊಲೀಸರಿಗೆ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಮುಖ್ಯವಾಗಿ ವಾಹನಗಳು ಹಾಳಾಗಿ ಮಾಲೀಕರಿಗೆ ನಷ್ಟವಾಗುತ್ತಿತ್ತು. ಅಲ್ಲದೇ ಪೊಲೀಸ್ ಠಾಣೆ ಆವರಣವು ಜಪ್ತಿ ವಾಹನಗಳಿಂದ ಗ್ಯಾರೇಜ್’ನಂತೆ ಕಾಣುತ್ತಿದ್ದವು. ಇವುಗಳನ್ನು ತಪ್ಪಿಸಲು ಡಾ.ಸಲೀಂ ಹೊಸ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದಂತೆ ಇನ್ನು ಮುಂದೆ ಅಪಘಾತ ಆದ 24 ಗಂಟೆಗಳಲ್ಲಿ ವಾಹನ ವಾಪಸ್ ನೀಡಬೇಕು ಎಂದು ಪೊಲೀಸರಿಗೆ ಕಮಿಷನರ್ ಎಂ.ಎ ಸಲೀಂ ಸೂಚಿಸಿದ್ದಾರೆ.
ಅಪಘಾತ ಆದ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಆರ್ಟಿಓ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದರು ತೊಂದರೆ ಇದೆಯಾ ಎಂದು ವರದಿ ಮಾಡಲಾಗುತ್ತದೆ. ಬಳಿಕ ಸಿಬ್ಬಂದಿ, ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours