Tumkurnews
ಮಹಿಳೆ ಕಾಣೆ
ತುಮಕೂರು; ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 36 ವರ್ಷದ ಮಹಿಳೆ ರೇಷ್ಮಾ ಕೋಂ. ಶೇಕ್ ಹುಸೇನ್ ಆಗಸ್ಟ್ 8ರ ಬೆಳಿಗ್ಗೆ 9 ಗಂಟೆಗೆ ತುಮಕೂರಿನ ಸಂಬಂಧಿಕರ ಮನೆಗೆಂದು ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಈಕೆಯ ಪತಿ ಶೇಕ್ ಹುಸೇನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯು 135 ಸೆಂ.ಮೀ. ಎತ್ತರ, ಕಪ್ಪು ಮೈಬಣ್ಣ, ದಪ್ಪನೆ ಶರೀರ ಹೊಂದಿದ್ದು, ಕನ್ನಡ ಮತ್ತು ಉರ್ದು ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಪೈಜಾಮ ಮತ್ತು ಬುರ್ಕಾ ಧರಿಸಿದ್ದಳು.
ಈಕೆಯ ಬಗ್ಗೆ ಮಾಹಿತಿ ಸಿಕ್ಕವರು ದೂ.ವಾ.ಸಂ. 08131-246522/ 08132-222210/ 08135-275257/ 0816-2272451ನ್ನು ಸಂಪರ್ಕಿಸಬಹುದೆಂದು ಸಬ್ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours