ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ನಾಪತ್ತೆ ಪ್ರಕರಣ
Tumkurnews
ತುಮಕೂರು; ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 58 ವರ್ಷ ವಯಸ್ಸಿನ ಚಿಕ್ಕ ಪುಟ್ಟಸ್ವಾಮಯ್ಯ ಹಾಗೂ 23 ವರ್ಷದ ಶ್ರೀಲಕ್ಷ್ಮೀ ಎಂಬುವರು ಕಾಣೆಯಾಗಿದ್ದು, ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ.
ಪ್ರಕರಣ-1: ಚಿಕ್ಕ ಪುಟ್ಟಸ್ವಾಮಯ್ಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ಕೊಡವತ್ತಿ ಗ್ರಾಮದ ನಿವಾಸಿಯಾಗಿದ್ದು, ಆಗಸ್ಟ್ 18, 2022ರಂದು ಸಂಜೆ 5.30ರ ಸಮಯದಲ್ಲಿ ಮನೆಯಿಂದ ಹೋದವನು ಮರಳಿ ಬಂದಿರುವುದಿಲ್ಲ ಎಂದು ಈತನ ಪತ್ನಿ ಶಾಂತಮ್ಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈತನು 5.12 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಅಂಗಿ, ಕಪ್ಪು ಚಡ್ಡಿ, ಎಡಗೈಯಲ್ಲಿ ವಾಚ್ ಇರುತ್ತದೆ.
ಪ್ರಕರಣ-2: ಶ್ರೀಲಕ್ಷ್ಮೀ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿಯ ಕೆಂಚನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಆಗಸ್ಟ್ 20, 2022ರಂದು 2.30ರ ಸಮಯದಲ್ಲಿ ಕಾಣೆಯಾಗಿದ್ದಾಳೆಂದು ಈಕೆಯ ಪತಿ ಮಾಯಣ್ಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈಕೆಯು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಟಾಪ್, ಕೆಂಪು ಬಣ್ಣದ ಪ್ಯಾಂಟ್ ಧರಿಸಿಸಿರುತ್ತಾಳೆ.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕವರು ದೂ.ವಾ.ಸಂ. 08132-223338, 225229, 220294, 0816-2278000 ಅಥವಾ ಮೊ.ಸಂ: 9480802964/36/00ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ತುಮಕೂರು; 47 ವರ್ಷದ ಪುರುಷ, 32 ವರ್ಷದ ಮಹಿಳೆ ನಾಪತ್ತೆ
+ There are no comments
Add yours