ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ; ನ್ಯಾಯಾಂಗ ತನಿಖೆಗೆ ಆಗ್ರಹ

1 min read

 

Tumkurnews
ತುಮಕೂರು; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಒತ್ತಾಯಿಸಿದರು.

ಸಿದ್ದರಾಮಯ್ಯರ ತಂಟೆಗೆ ಬಂದ್ರೆ ರಾಜ್ಯ ಹೊತ್ತಿ ಉರಿಯುತ್ತೆ; ಕೆ.ಎನ್ ರಾಜಣ್ಣ ಎಚ್ಚರಿಕೆ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಮೊಟ್ಟೆ ಎಸೆತವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇವೆ. ಸಿದ್ದರಾಮಯ್ಯರ ಮೇಲೆ ಹಲ್ಲೆ ಮಾಡಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕುಮ್ಮಕ್ಕು ಕೊಡುವುದು ಕಂಡು ಬಂದರೆ ಪ್ರತಿಭಟನೆ ಮಾಡುತ್ತೇವೆ. ಸಮಾನ ಮನಸ್ಕರು ಸೇರಿ ಏನು ಮಾಡಬೇಕು ಎಂದು ಕುಳಿತು ಚರ್ಚೆ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಕ್ಷಮ್ಯ ಅಪರಾಧ; ಟಿ.ಬಿ ಜಯಚಂದ್ರ ಖಂಡನೆ
ಮಾಡಿರುವ ತಪ್ಪನ್ನು ತಿದ್ದಿಕೊಂಡು ಮುಂದೆ ಸರಿ ಹೋದರೆ ಸರಿ. ಇಲ್ಲದಿದ್ರೆ ಮೊಟ್ಟೆಯನ್ನೇ ಎಸೆಯುತ್ತೇವೆ ಎಂದರೆ ನಮ್ಮ ಕೈಗೆ ಏನು ಸಿಗುತ್ತದೆಯೋ ಅದನ್ನು ನಾವು ಎಸೆಯುತ್ತೇವೆ. ಕಲ್ಲು ಸಿಗುತ್ತದೆಯೋ, ಮತ್ತೊಂದು ಸಿಗುತ್ತದೆಯೋ ಅದರಲ್ಲೇ ಎಸೆಯುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಎಚ್ಚರಿಕೆ ನೀಡಿದರು.

You May Also Like

More From Author

+ There are no comments

Add yours