ಕೌಟುಂಬಿಕ ನ್ಯಾಯಾಲಯದಲ್ಲಿ ಪುನಃ ಒಂದಾದ 5 ದಂಪತಿಗಳ
Tumkurnews
ತುಮಕೂರು; ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಐದು ದಂಪತಿಗಳು ನ್ಯಾಯಾಧೀಶರು, ವಕೀಲರ ಸಲಹೆಯಂತೆ ತಮ್ಮ ಅರ್ಜಿಯನ್ನು ಹಿಂಪಡೆದು ಪುನಃ ಒಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶನಿವಾರ ನಡೆದ ಲೋಕ್ ಅದಾಲತ್(ಜನತಾ ನ್ಯಾಯಾಲಯ)ನಲ್ಲಿ ನಡೆದ ರಾಜಿ ಸಂಧಾನದಲ್ಲಿ ದಂಪತಿಗಳು ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ಹಾರಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಒಂದಾಗಿರುವುದು ಎರಡೂ ಕಡೆಯ ಕುಟುಂಬ ಸದಸ್ಯರಿಗೆ ಮತ್ತು ಅವರ ಸ್ನೇಹಿತರಿಗೆ ಸಂತಸ ತಂದಿದೆ.
ತುಮಕೂರು ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 5 ದಂಪತಿಗಳು ಲೋಕ್ ಅದಾಲತ್ ನಲ್ಲಿ ಒಂದಾಗಿರುವುದು ಎಂದು ಹಿರಿಯ ವಕೀಲರುಗಳು ತಿಳಿಸಿದರು.
KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!
ಈ ಸಂದರ್ಭದಲ್ಲಿ ಕೌಟುಂಬಿಕ ಜಿಲ್ಲಾ ನ್ಯಾಯಾಧೀಶ ಎನ್.ಮುನಿರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಆಡಳಿತ ಶಿರಸ್ತೇದಾರ್ ಎಂ.ಕೆ.ಜಗದೀಶ್, ನವೀನ್ ಕುಮಾರ್, ಗೋವಿಂದರಾಜು, ಆಡಳಿತಾಧಿಕಾರಿ ನರಸಿಂಹಪ್ಪ ಮುಂತಾದವರು ಉಪಸ್ಥಿತರಿದ್ದರು.
ಸ್ವಾತಂತ್ರೋತ್ಸವ; ತುಮಕೂರಿನ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತಾಲೀಮು
+ There are no comments
Add yours