Tumkurnews
ತುಮಕೂರು; ರೈಲಿಗೆ ಅಡ್ಡ ಮಲಗಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪದ ಶಿವನಿ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಜಗದೀಶ್ ಬಿ.ಎಂ ಎಂಬುವರ ಪುತ್ರ ಹೇಮಂತ್ ಎಂ.ಜೆ ಮೃತ ದುರ್ದೈವಿ. ಈತ ತುಮಕೂರಿನ ಶೇಷಾದ್ರಿ ಪುರಂ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ಓದುತ್ತಿದ್ದನು.
ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ಶುಕ್ರವಾರ ರಾತ್ರಿ ತಾನು ವಾಸವಿದ್ದ ರೂಮಿನಿಂದ ಹೊರ ಬಂದಿರುವ ಈತ ಹೊರಗಿನಿಂದ ಚಿಲಕ ಹಾಕಿಕೊಂಡು ತೆರಳಿದ್ದಾನೆ. ಬಳಿಕ ತುಮಕೂರಿನ ಗುಬ್ಬಿ ಬೈಪಾಸ್ ಬಳಿ ರೈಲ್ವೆ ಹಳಿಗೆ ಅಡ್ಡ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ಬೆಳಗ್ಗೆ 9.30ರ ಸಮಯದಲ್ಲಿ ರೈಲ್ವೆ ಹಳಿ ಮೇಲೆ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ರೈಲಿಗೆ ಅಡ್ಡ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸಾವಿಗೆ ನಿಜವಾದ ಕಾರಣ ತನಿಖೆ ನಂತರ ತಿಳಿಯಬೇಕಿದೆ. ಶವದ ಬಳಿ ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

(ರೈಲಿಗೆ ಅಡ್ಡ ಮಲಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಶವ)
ಕೊನೆಗೂ ಮಾಲೀಕರ ಮನೆ ಸೇರಿದ ಆಫ್ರಿಕನ್ ಗಿಣಿ; ಸಿಕ್ಕ ಬಹುಮಾನವೆಷ್ಟು ಗೊತ್ತೇ?
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours