Tumkur News
ಮುಂಬೈ: ಹೆಣ್ಣನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಹೋಗತೆ ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಎಂಟಿಸಿ ಬಸ್ ದರ ಹೆಚ್ಚಳ ಸಾಧ್ಯತೆ!
ಮಹೀಳೆಯೊಬ್ಬಳು ಗಂಡನಿಂದ ಜೀವನವೆಚ್ಚ ಕೊಡಿಸುವಂತೆ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದಳು. ನ್ಯಾಯಾಲಯವು ಪತ್ನಿಗೆ ತಿಂಗಳಿಗೆ 5000 ರೂ. ಹಾಗೂ ಮಗಳಿಗೆ 7000 ರೂ. ಕೊಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದು, ಶುಕ್ರವಾರ ಅದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಮುಂದೂಡಿಕೆ
ಕುಟುಂಬದ ಆರ್ಥಿಕತೆಗೆ ಹೆಣ್ಣು ಪಾಲು ಕೊಡಬೇಕು ಎನ್ನುವುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಲ್ಲ. ಆಕೆ ಕೆಲಸಕ್ಕೆ ಅರ್ಹಳು ಎನ್ನುವ ಒಂದೇ ಕಾರಣಕ್ಕೆ ಅವಳನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸಲಾಗದು. ಅದು ಅವಳ ಆಯ್ಕೆಯಾಗಿರುತ್ತದೆ ಎಂದು ನ್ಯಾಯಮೂರ್ತಿ ಭಾರತಿ ದಾಂಗ್ರೆ ತಿಳಿಸಿದ್ದಾರೆ.
+ There are no comments
Add yours