cool hit counter

ವಂದೇ ಭಾರತ್ ರೈಲಿನಲ್ಲಿ ಟಿಕೆಟ್ ಸ್ಕ್ಯಾಮ್?

₹700 ಟಿಕೆಟ್ ₹380ಕ್ಕೆ ನೀಡಲು ಮುಂದಾದ ಟಿಟಿಇ ಅಮಾನತು

Webgauge India
1 Min Read

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನಿಗೆ ₹700 ಮೌಲ್ಯದ ಟಿಕೆಟ್ ಅನ್ನು ₹380ಕ್ಕೆ ನೀಡಲು ಟಿಕೆಟ್ ಪರಿಶೀಲಕ (ಟಿಟಿಇ) ಮುಂದಾದ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದ ಟಿಟಿಇಯನ್ನು ಭಾರತೀಯ ರೈಲ್ವೆ ಇಲಾಖೆ ಅಮಾನತುಗೊಳಿಸಿದೆ.

ವೈರಲ್ ವಿಡಿಯೋದಲ್ಲಿ ಟಿಟಿಇ ಮತ್ತು ಪ್ರಯಾಣಿಕನ ನಡುವೆ ನಡೆದ ಮಾತುಕತೆ ಸೆರೆಯಾಗಿದ್ದು, ಕಡಿಮೆ ಮೊತ್ತಕ್ಕೆ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿರುವುದು ಕೇಳಿಬಂದಿದೆ. ಬಳಿಕ ರಸೀದಿ ನೀಡುವ ವಿಚಾರ ಬಂದಾಗ ಮೊತ್ತದಲ್ಲಿ ಬದಲಾವಣೆ ಮಾಡಿರುವ ಆರೋಪವೂ ಕೇಳಿಬಂದಿದೆ.

https://x.com/gharkekalesh/status/2054140080345014361?ref_src=twsrc%5Etfw%7Ctwcamp%5Etweetembed%7Ctwterm%5E2054140080345014361%7Ctwgr%5E40aebbc0937ffd4f1d60c01f67a0a458000d5ef1%7Ctwcon%5Es1_c10&ref_url=https%3A%2F%2Fd-1724780407978318234.ampproject.net%2F2605071401000%2Fframe.htmld60c01f67a0a458000d5ef1%7Ctwcon%5Es1_c10&ref_url=https%3A%2F%2Fd-1724780407978318234.ampproject.net%2F2605071401000%2Fframe.html

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ಭ್ರಷ್ಟಾಚಾರದ ಉದಾಹರಣೆ ಎಂದು ಟೀಕಿಸಿದರೆ, ಇನ್ನೂ ಕೆಲವರು ಪ್ರಯಾಣಿಕರಿಗೆ ನೆರವಾಗುವ ಉದ್ದೇಶ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆಗೆ ತಕ್ಷಣ ಪ್ರತಿಕ್ರಿಯಿಸಿರುವ ಭಾರತೀಯ ರೈಲ್ವೆ ಇಲಾಖೆ, ಸಂಬಂಧಪಟ್ಟ ಟಿಟಿಇ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ. ನಿಯಮಬಾಹಿರ ಟಿಕೆಟ್ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

Share This Article
Leave a Comment