ತುಮಕೂರು(ಜು.2) tumkurnews.in
ಜಿಲ್ಲೆಯಲ್ಲಿ ಕೊರೋನಾ ನಾಗಾಲೋಟ ಮುಂದುವರಿದಿದೆ. ಜುಲೈ 2ರ ಗುರುವಾರ ಒಂದೇ ದಿನ 44 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.
ಚಿಕ್ಕನಾಯಕನಹಳ್ಳಿ 5, ಗುಬ್ಬಿ 13, ಕೊರಟಗೆರೆ 17, ಕುಣಿಗಲ್ 3, ತಿಪಟೂರು 5, ತುರುವೇಕೆರೆ ತಾಲ್ಲೂಕಿನಲ್ಲಿ 1 ಪ್ರಕರಣ ಕಂಡು ಬಂದಿದೆ.
ಮಧುಗಿರಿ, ಪಾವಗಡ, ಶಿರಾ, ತುಮಕೂರು ತಾಲೂಕಿನಲ್ಲಿ ಯಾವುದೇ ಹೊಸ ಪ್ರಕರಣ ಗುರುವಾರ ಕಂಡು ಬಂದಿಲ್ಲ. ಗುರುವಾರ ಯಾರು ಕೂಡ ಗುಣವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 127 ಜನರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.
+ There are no comments
Add yours