ತುಮಕೂರು: ಗುಡುಗಿದ ಡಿಸಿ: ನಡುಗಿದ ಮೈಕ್ರೋ ಫೈನಾನ್ಸ್

1 min read

 

ಗುಡುಗಿದ ಡಿಸಿ: ನಡುಗಿದ ಮೈಕ್ರೋ ಫೈನಾನ್ಸ್

Tumkur news
ತುಮಕೂರು: ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಬೇಸತ್ತು ಸ್ವಗ್ರಾಮವನ್ನು ತೊರೆದಿದ್ದ ವಿನುತ ಮತ್ತು ಮಾರುತಿ ಕುಟುಂಬ ಮನೆಗೆ ಮರಳಿದ್ದು, ಸ್ವಗ್ರಾಮ ಸೇರಲು ಕಾರಣವಾದ ಜಿಲ್ಲಾಡಳಿತಕ್ಕೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

ತುಮಕೂರು: ಮೈಕ್ರೋ ಫೈನಾನ್ಸ್’ಗಳಿಗೆ ಬಿತ್ತು ಮೂಗುದಾರ: ಹೀಗೆಲ್ಲಾ ಸಾಲ ವಸೂಲಿ ಮಾಡುವಂತಿಲ್ಲ
ಜಿಲ್ಲಾಧಿಕಾರಿಗಳ ಆದೇಶಕ್ಕೆ ಜನರಿಂದ ಮೆಚ್ಚುಗೆ: ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಯ ನಿವಾಸಿ ವಿನುತ ಮತ್ತು ಮಾರುತಿ ದಂಪತಿ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2.50ಲಕ್ಷ ರೂ.ಗಳ ಸಾಲ ಪಡೆದಿದ್ದರು. ಕೆಲವು ಕಂತುಗಳನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ಯಾವುದೇ ನೋಟೀಸ್ ನೀಡದೆ ಏಕಾಏಕಿ ವಿನುತ ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿ ಅವಮಾನ ಮಾಡಿದ್ದರಿಂದ ಕುಟುಂಬವು ಸ್ವಗ್ರಾಮ ಬಿಟ್ಟು ಬೆಂಗಳೂರು ಸೇರಿತ್ತು.

ತುಮಕೂರು ಜಿಲ್ಲೆಯಲ್ಲಿ ರಾಜ್ಯದಲೇ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲ!
ವಿಷಯ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಜನವರಿ 30ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ವಿನುತ ಅವರು ಪಡೆದ 2.50ಲಕ್ಷ ಸಾಲಕ್ಕೆ ಕಂಪನಿಯು 4.50ಲಕ್ಷ ರೂ.ಗಳನ್ನು ವಸೂಲಿ ಮಾಡಿರುವುದು, ಪಡೆದ ಸಾಲಕ್ಕೆ ಪ್ರತಿ ಕಂತನ್ನು ಪಾವತಿ ಮಾಡಿದ್ದು, ಕೆಲವು ಕಂತನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ವಿನುತ ಅವರ ಕುಟುಂಬಕ್ಕೆ ಕಿರುಕುಳ ನೀಡಿ ಊರು ಬಿಡಲು ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಕೆರಳಿದ ಡಿಸಿ ಶುಭ ಕಲ್ಯಾಣ್ ಅವರು, ಮೈಕ್ರೋ ಫೈನಾನ್ಸ್’ಗಳು ಬಡವರಿಗೆ ಇಷ್ಟೊಂದು ಕಿರುಕುಳ ನೀಡಿದರೆ ಅವರು ಬದುಕುವುದಾದರೂ ಹೇಗೆ? ಎಂದು ಗುಡುಗಿದ್ದರು.

ಮೈಕ್ರೋಫೈನಾನ್ಸ್ ಹಾವಳಿ: ಇಂದು ಜಿಲ್ಲಾಧಿಕಾರಿ ಮಹತ್ವದ ಸಭೆ
ಫೈನಾನ್ಸ್ ಕಂಪನಿಯು ವಿನುತ ಅವರ ಮನೆಯ ಗೋಡೆಯ ಮೇಲೆ ಬರೆಸಿರುವುದ್ದನು ಅಳಿಸಿ ಹೊಸದಾಗಿ ಬಣ್ಣ ಬಳಿಸಿ, ಕುಟುಂಬವನ್ನು ಮರಳಿ ಮನೆ ಸೇರಿಸಲು ಕ್ರಮಕೈಗೊಳ್ಳಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಅವರಿಗೆ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಆದೇಶಿಸಿದ್ದರು.


ರಕ್ಷಣೆಗೆ ಧಾವಿಸಿದ ಅಧಿಕಾರಿಗಳು:
ಜಿಲ್ಲಾಧಿಕಾರಿಗಳ ಆದೇಶವನ್ನು ಕೂಡಲೇ ಪಾಲಿಸಿದ ಕೊರಟಗೆರೆ ಅಧಿಕಾರಿಗಳ ತಂಡವು, ಫೈನಾನ್ಸ್ ಕಂಪನಿಯು ವಿನುತ ಅವರ ಮನೆಯ ಗೋಡೆ ಮೇಲೆ ಬರೆಸಿದ್ದ ಸಾಲುಗಳನ್ನು ಅಳಿಸಿ, ಹೊಸದಾಗಿ ಬಣ್ಣ ಬಳಿದು ಕುಟುಂಬವನ್ನು ಮನೆಗೆ ಮರಳಿ ಕರೆಸುವಲ್ಲಿ ಯಶಸ್ವಿಯಾಗಿದೆ. ವಿನುತ ಮತ್ತು ಮಾರುತಿ ಕುಟುಂಬವು ಸ್ವಗ್ರಾಮಕ್ಕೆ ಮರಳಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಧಿಕಾರಿಗಳ ತಂಡದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತುಮಕೂರು: ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಪೂರೈಕೆ: ಮೆಡ್ ಪ್ಲಸ್ ಸಿಬ್ಬಂದಿ ಸೇರಿ 7 ಮಂದಿ ಬಂಧನ

About The Author

You May Also Like

More From Author

+ There are no comments

Add yours