ತುಮಕೂರು: ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಪೂರೈಸುತ್ತಿದ್ದ ಕಿಡಿಗೇಡಿಗಳ ಬಂಧನ: ಪೋಷಕರನ್ನು ಬೆಚ್ಚಿ ಬೀಳಿಸಿದ ಪ್ರಕರಣ
Tumkur news
ತುಮಕೂರು: ನಗರದಲ್ಲಿ ಮಾದಕ ವಸ್ತುಗಳನ್ನಾಗಿ ಟೈಡಾಲ್ ಮಾತ್ರೆಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ:
ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆ, ರೈಲ್ವೆ ಹಳಿಗಳ ಪಕ್ಕ ಹಾಗೂ ಉಪ್ಪಾರಹಳ್ಳಿ ಬ್ರೀಡ್ಜ್, ಶ್ರೀದೇವಿ ಕಾಲೇಜುಗಳ ಬಳಿ , ಕೆಲ ಹುಡುಗರು ಮೆಡಿಕಲ್ ಶಾಪ್’ಗಳಲ್ಲಿ ಹೋಗಿ ಸದರಿ ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಪ್ರೇರೇಪಿತರಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡ್ ಪ್ಲಸ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬಾತ ಮೆಡಿಕಲ್’ಗಳಿಗೆ ಬರುವ ಮೆಡಿಕಲ್ ರೆಪ್ರೆಸೆಂಟೇಟಿವ್’ಗಳಿಗೆ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದಾನೆ.
ಆದರಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಮೆಡಿಕಲ್ ರೆಪ್ ರಾಘವೇಂದ್ರ, ಎಂಬಾತ ಸದರಿ ಮಾತ್ರೆಗಳನ್ನು ಯಾವುದೇ ಬಿಲ್’ಗಳಿಲ್ಲದೆ ಆಕ್ರಮವಾಗಿ ಮೊದಲು 345 ರೂ. ಗೆ ಒಂದು ಶೀಟ್’ನಂತೆ 4 ಶೀಟ್’ಗಳನ್ನು ತಂದು ತಂದುಕೊಟ್ಟಿದ್ದಾನೆ. ಇದೇ ವೇಳೆ ಮಾತ್ರೆಗಳಿಗೆ ಬೇಡಿಕೆ ಜಾಸ್ತಿಯಾಗಿದೆ.
ಈ ಕಾರಣ ಭಾನು ಪ್ರಕಾಶ್ ಮತ್ತು ರಾಘವೇಂದ್ರ ಸೇರಿಕೊಂಡು ಸದರಿ ಮಾತ್ರೆಗಳನ್ನು ಅಂಗಡಿಯಲ್ಲಿ ಮಾರಾಟ ಮಾಡದೇ ಸದರಿ ಮಾತ್ರೆಗಳನ್ನು ಕೇಳಿಕೊಂಡು ಬರುವ ಗಿರಾಕಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡಿ, ಶ್ರೀದೇವಿ ಕಾಲೇಜ್ ಬಳಿ, ಇಂಡಸ್ಟ್ರೀಯಲ್ ಏರಿಯಾಗಳಿಗೆ ಕರೆಸಿಕೊಂಡು ಆಕ್ರಮ ಲಾಭ ಗಳಿಸುವ ಉದ್ದೇಶದಿಂದ 10 ಮಾತ್ರೆಗಳಿರುವ ಒಂದು ಶೀಟ್ ಅನ್ನು 800 ರೂ.ಗಳಿಗೆ ಮಾರಾಟ ಮಾಡಲು ಆರಂಭಿಸಿದ್ದಾರೆ.
ಇದಲ್ಲದೇ ಈ ಹಿಂದೆ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವನಿಗೆ ಮೊಬೈಲ್ ಕೊಡಿಸಿ, ಸದರಿ ನಂಬರ್’ಗೆ ಟೈಡಾಲ್ ಮಾತ್ರೆಗಳನ್ನು ಕೇಳಿಕೊಂಡು ಪೋನ್ ಮಾಡುವವರನ್ನು ಕರೆಸಿ 800 ರೂ.ಗೆ 10 ಮಾತ್ರೆಗಳಿರುವ ಶೀಟನ್ನು ಮತ್ತು ಸೀರಂಜ್ ಅನ್ನು ಮಾರಾಟ ಮಾಡು ಎಂದು ತಿಳಿಸಿದ್ದಾರೆ.
ಅದರಂತೆ ಅಭಿಷೇಕ್, ಸದರಿ ಮಾತ್ರೆ ಮತ್ತು ಸಿರಂಜ್’ಗಳನ್ನು ಒಂದು ಬ್ಯಾಗ್’ನಲ್ಲಿ ಇಟ್ಟುಕೊಂಡು ಭಾನುಪ್ರಕಾಶ್ ತಂದು ಕೊಡುತಿದ್ದ ಮಾತ್ರೆಗಳನ್ನು ಪೋನ್ ಮಾಡುತ್ತಿದ್ದ ಮೊಹಮ್ಮದ್ ಸೈಫ್, ಸೈಯದ್ ಲುಕ್ಮಾನ್, ಅಫ್ತಬ್, ಗುರುರಾಜ್ ಹೆಚ್ ಎಸ್ ಎಂಬುವರಿಗೆ ಮತ್ತು ಇತರರಿಗೆ ಶಿರಾಗೇಟ್ ಬಳಿ ಮತ್ತು ಇಂಡಸ್ಟ್ರಿಯಲ್ ಏರಿಯಾ ಬಳಿ ಕರೆಸಿಕೊಂಡು ಮಾರಾಟ ಮಾಡುತ್ತಿದ್ದನು.
800 ರೂ.ಗಳಿಗೆ ತೆಗೆದುಕೊಂಡು ಹೋದ 10 ಮಾತ್ರೆಗಳಿರುವ ಶೀಟ್ನ್ನು ಮೇಲ್ಕಂಡ ಆರೋಪಿತರುಗಳು ಒಂದೊಂದು ಮಾತ್ರೆಗಳನ್ನು ಕವರ್ ಸಮೇತ ಕಟ್ ಮಾಡಿ ಒಂದು ಮಾತ್ರೆಗೆ 100 ರೂ. ರೂ.ಗಳಿಂದ 200 ರೂ.ಗಳ ವರೆಗೆ ಮಾರಾಟ ಮಾಡಿ ಆಕ್ರಮ ಲಾಭ ಗಳಿಸುತ್ತಿದ್ದರು. ಅವರು ಸಹ ಆಗಾಗ ಆ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಸದರಿ ಮಾತ್ರೆಗಳ ನೀರು ಶರೀರಕ್ಕೆ ಹೋಗುತ್ತಿದ್ದಂತೆ, ಕಿಕ್ ಹೊಡೆಯುತ್ತದೆ ಮತ್ತು ನಶೆ ಬರುತ್ತದೆಂದಂದು ಈ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳ ಬಂಧನ:
ಅಕ್ರಮದ 7 ಆರೋಪಿಗಳನ್ನು ಜನವರಿ 28ರಂದು ಬಂಧಿಸಿ ಅವರ ಬಳಿ ಇದ್ದ 10,500 ರೂ ಬೆಲೆಯ 300 ಮಾತ್ರೆಗಳನ್ನು ಮತ್ತು ಸೀರಂಜ್’ಗಳನ್ನು, ಮೊಬೈಲ್ ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಲಾಭಗಳಿಸುವ ಉದ್ದೇಶ ಹಾಗೂ ಸಾಮಾಜಿಕ ಕ್ರೌರ್ಯವನ್ನುಂಟು ಮಾಡಿ, ಅತಿ ಚಿಕ್ಕ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳ ಶರೀರದ ಮೇಲೆ ಹಾಗು ಮೆದುಳಿನ ಮೇಲೆ ಪರಿಣಾಮ ಬೀರುವ ಇಂತಹ ವಿಷದ ಮಾತ್ರೆಗಳನ್ನು ಮಾರಾಟ ಮಾಡಿ, ಕೆಟ್ಟ ವಾತವರಣವನ್ನುಂಟು ಮಾಡಿರುವ ಬಂಧಿತರ ಮೇಲೆ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 13/2025 ಕಲಂ 123, 278, 280 ರೆ.ವಿ. 3(5) ಬಿ.ಎನ್.ಎಸ್. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಅಟ್ಟಲಾಗಿದೆ.
ತಲೆ ಮರೆಸಿಕೊಂಡವರಿಗಾಗಿ ತಲಾಶ್: ಪ್ರಕರಣದಲ್ಲಿ ಪಾಲ್ಗೊಂಡು ಈಗ ತಲೆ ಮರೆಸಿಕೊಂಡಿರುವ ಇನ್ನೂ ಕೆಲವರನ್ನು ಪತ್ತೆ ಮಾಡಿ ಬಂಧಿಸಬೇಕಿದ್ದು, ಅವರುಗಳನ್ನು ಅತೀ ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
1) ಭಾನು ಪ್ರಕಾಶ್ ಬಿನ್ ಲಿಂಗಣ್ಣ 32 ವರ್ಷ, ಯಲ್ಲಾಪುರದ ಮೆಡ್ ಪ್ಲಸ್’ನಲ್ಲಿ ಕೆಲಸ, ವಾಸ ಯಲ್ಲಾಪುರದ ಎಸ್ ಎಲ್ ಎನ್ ಬಡಾವಣೆಯ ಜಯಮ್ಮನವರ ಬಾಡಿಗೆ ಮನೆಯಲ್ಲಿ ವಾಸ. ಖಾಯಂ ವಾಸ ಹುಣಸೇಕಟ್ಟೆ. ಬುಕ್ಕಾಪಟ್ಟಣ ಹೋ. ಶಿರಾ ತಾಲ್ಲುಕು.
2) ರಾಘವೇಂದ್ರ ಬಿನ್ ನಾರಯಣ ಮೂರ್ತಿ. 43 ವರ್ಷ, ಮೆಡಿಕಲ್ ರೆಪ್ರೆಸೆಂಟಿವ್ ಕೆಲಸ, ವಾಸ 3ನೇ ಅಡ್ಡರಸ್ತೆ. ಅನ್ನಪೂರ್ಣೇಶ್ವರಿ ಬಡಾವಣೆ ,ಆಂದ್ರಹಳ್ಳಿ ಮೇನ್ ರೋಡ್, ನಾಗಸಂದ್ರ ಪೋಸ್ಟ್. ಬೆಂಗಳೂರು. ಖಾಯಂ ವಾಸ ಕಾರಂಜಿ ಆಂಜನೇಯ ದೇವಸ್ಥಾನ ಎದುರಿಗೆ. ಬಾಡಿಗೆ ಮನೆ, ಚಿಕ್ಕಪೇಟೆ ತುಮಕೂರು.
3) ಅಭಿಷೇಕ್ ಬಿನ್ ಶಿವಕುಮಾರ. 23 ವರ್ಷ, ಆಟೋ ಪ್ಲಾಸ್ಟ್ ಕಂಪನಿಯಲ್ಲಿ ಕೆಲಸ, ಸಿದ್ದಗಿರಿ ನಗರ, ಯಲ್ಲಾಪುರ ತುಮಕೂರು ಖಾಯಂ ವಾಸ ಪೂಜಾರಹಳ್ಳಿ, ದೊಡ್ಡೇರಿ ಹೋಬಳಿ. ಮಧುಗಿರಿ ತಾಲ್ಲೂಕು.
4) ಮೊಹಮ್ಮದ್ ಸೈಪ್ ಬಿನ್ ಲೇಟ್ ಮೊಹಮ್ಮದ್ ತಾಜವುದ್ದಿನ್, 22 ವರ್ಷ, ಕಾರ್ ಡ್ರೈವರ್ ಕೆಲಸ, ಸಂತೆ ಬೀದಿ, ಕ್ಯಾತ್ಸಂದ್ರ, ತುಮಕೂರು.
5) ಸೈಯದ್ ಲುಕ್ಮಾನ್ ಬಿನ್ ನೌಷದ್, 23 ವರ್ಷ, ಪೈಂಟ್ ಕೆಲಸ, ಸಂತೆ ಬೀದಿ, ಕ್ಯಾತ್ಸಂದ್ರ, ತುಮಕೂರು.
6). ಅಫ್ತಬ್ ಬಿನ್ ಹಮ್ಜು, 23 ವರ್ಷ, ವೆಲ್ಡಿಂಗ್ ಕೆಲಸ, ಸಂತೆ ಬೀದಿ, ಕ್ಯಾತ್ಸಂದ್ರ, ತುಮಕೂರು
7) ಗುರುರಾಜ್ ಹೆಚ್ ಎಸ್ ಬಿನ್ ಶಾಮಣ್ಣ ಹೆಚ್. ಎನ್. 28 ವರ್ಷ.. ಎನ್, ಎಫ್. ಏ ಮಾರ್ಕೆಟಿಂಗ್’ನಲ್ಲಿ ಕೆಲಸ. ಸಾಯಿಬಾಬಾ ಟೆಂಪಲ್ ಹಿಂಭಾಗ, ಅಮರಜ್ಯೋತಿ ನಗರ, ತುಮಕೂರು. ಖಾಯಂ ವಾಸ ಹೊಸ ಬಡಾವಣೆ , ಚೊಕ್ಕೇನಹಳ್ಳಿ ಕೆಸರು ಮಡು ಪೋಸ್ಟ್, ತುಮಕೂರು ತಾಲ್ಲೂಕು.
ಪೊಲೀಸ್ ಮನವಿ: ತುಮಕೂರು ನಗರದಲ್ಲಿ ಇತ್ತೀಚೆಗೆ ಶಾಲಾ, ಕಾಲೇಜುಗಳ ಬಳಿ ಪಾರ್ಕ್ ಬಳಿ ನಿರ್ಜನ ಪ್ರದೇಶಗಳಲ್ಲಿ ಇಂತಹ ನಶೆ ಬರಿಸುವ ಮಾತ್ರೆಗಳ ಖಾಲಿ ಕವರ್’ಗಳು, ಸಿಗರೇಟ್ ಫಿಲ್ಟರ್’ಗಳು ಮತ್ತು ಸೀರಂಜ್’ಗಳು ಬಿದ್ದಿರುವ ಬಗ್ಗೆ ಮಾಹಿತಿ ಇದ್ದುದ್ದರಿಂದ ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ಅವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ಹಾಗೂ ತಿಲಕ್ ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕ ಪುರುಷೋತ್ತಮ್ ಅವರ ಮಾರ್ಗಸೂಚನೆ ಮೇರೆಗೆ ಹೊಸಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಭಾರತಿ ಮತ್ತು ಎ.ಎಸ್.ಐ. ಅಂಜೀನಪ್ಪ ಹಾಗೂ ಠಾಣೆಯ ಸಿಬ್ಬಂದಿ ಮಂಜುನಾಥ್, ಕೆ.ಟಿ. ನಾರಾಯಣ, ತಿಲಕ್ ಪಾರ್ಕ್ ಠಾಣೆಯ ನಿಜಾಮುದ್ದೀನ್ ಹಾಗೂ ಮಧು, ಸುನಿಲ್, ನಧಾಫ್, ಲೋಕೇಶ್ ರವರುಗಳು ಮೇಲ್ಕಂಡ ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿರುತ್ತಾರೆ. ಈ ಪ್ರಕರಣದಲ್ಲಿ 7 ಜನ ಆರೋಪಿತರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಐ.ಪಿ.ಎಸ್ ಪ್ರಶಂಸಿಸಿದ್ದಾರೆ.
ಪೊಲೀಸ್ ಮನವಿ: ಸದರಿ ನಶೆ ಬರಿಸುವ ವಿಷಪೂರಿತ ಮಾತ್ರೆಗಳ ಸೇವನೆಯಿಂದ ಯುವ ಜನತೆ ಮತ್ತು ವಿದ್ಯಾರ್ಥಿಗಳ ಶರೀರಕ್ಕೆ ಮತ್ತು ಮೆದುಳಿಗೆ ಹಾನಿಯುಂಟಾಗಿ ಅವರುಗಳ ಜೀವನ ಹಾಳಾಗುತ್ತದೆ. ಆದ್ದರಿಂದ ಮಕ್ಕಳ ಮೇಲೆ ನಿಗಾವಹಿಸುವಂತೆ ಸಾರ್ವಜನಿಕರು ಮತ್ತು ಪೋಷಕರಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಮನವಿ ಮಾಡಿಕೊಂಡಿದೆ.
+ There are no comments
Add yours