ಸಮಾಜಕ್ಕೆ ಧರ್ಮರಾಯನ ಸತ್ಯ ಮತ್ತು ದುರ್ಯೋಧನನ ಸ್ನೇಹಪರ ವ್ಯಕ್ತಿತ್ವ ಎರಡು ಮುಖ್ಯ
Tumkur news
ತುಮಕೂರು: ಸಮಾಜಕ್ಕೆ ಧರ್ಮರಾಯನ ಸತ್ಯ ಮತ್ತು ದುರ್ಯೋಧನನ ಸ್ನೇಹಪರ ವ್ಯಕ್ತಿತ್ವ ಎರಡು ಮುಖ್ಯ. ಇವರೆಡು ಮೇಳೈಸಿದರೆ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ ಅಭಿಪ್ರಾಯಪಟ್ಟರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು, ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಂತರಾಜು ಕೌತುಮಾರನಹಳ್ಳಿ ನಿರ್ದೇಶನದ ಸುಯೋಧನ ರಂಗ ಪ್ರಯೋಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಮಕೂರು: ಮೈಕ್ರೋ ಫೈನಾನ್ಸ್ ಕಿರುಕುಳ: ವ್ಯಕ್ತಿ ಸಾವು
ಎಂತಹ ಸಂದರ್ಭದಲ್ಲಿಯೂ ಸತ್ಯ ಹೇಳುವ ಧರ್ಮರಾಯನ ಜೊತೆಗೆ, ತನ್ನ ಸ್ನೇಹ ಬಯಸಿದವನ ಜಾತಿ, ಧರ್ಮ ನೋಡದೆ ಆತನನ್ನು ಕೊನೆಯ ವರೆಗೆ ಜೊತೆಯಲ್ಲಿಯೇ ಇಟ್ಟುಕೊಂಡು ಬದುಕುವ ಧರ್ಯೋಧನ ಗುಣ ಎರಡನ್ನು ಮನುಷ್ಯರು ಅಳವಡಿಸಿಕೊಂಡರೆ ಮತ್ತೊಂದು ಹೊಸ ಪ್ರಪಂಚವನ್ನು ಕಾಣಬಹುದೆಂದರು.
ಇಂದಿನ ಅಧುನಿಕ ಕಾಲದಲ್ಲಿಯೂ ಪುರಾಣದ ಕೃತಿಗಳಾದ ರಾಮಾಯಣ, ಮಹಾಭಾರತ, ಭಗವ್ದಗೀತೆ ಹೊರತು ಪಡಿಸಿ ನಾಟಕದ ಕತೆಗಳು ಅತಿ ವಿರಳ. ಆದರೆ ಇವೆಲ್ಲವುಗಳಿಗೂ ಮೀಗಿಲಾದ ಗ್ರಂಥವೊಂದಿದೆ, ಅದೇ ಸಂವಿಧಾನ. ರಾಮಾಯಣ, ಮಹಾಭಾರತದಲ್ಲಿನ ಎಲ್ಲಾ ಒಳ್ಳೆಯ ಅಂಶಗಳನ್ನು ಜನರು ತಮ್ಮಲ್ಲಿ ಅಳವಡಿಸಿಕೊಂಡ ರೀತಿ, ಸಂವಿಧಾನವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಸಂವಿಧಾನ ಪಾಲನೆಯಿಂದ ಜನರಲ್ಲಿ, ನೆಮ್ಮದಿ, ಶಾಂತಿಯನ್ನು ಕಾಣಬಹುದಾಗಿದೆ ಎಂದು ಡಾ.ಕೆ. ನಾಗಣ್ಣ ಹೇಳಿದರು.
ದ್ವಿಚಕ್ರ ವಾಹನದಲ್ಲಿ 4 ಜನ ರೈಡ್! ಪೊಲೀಸರಿಗೆ ಅವಾಜ್; ನಾಲ್ವರು ಪುಂಡರ ಬಂಧನ
ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ,ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಅನೇಕ ಪ್ರಯೋಗಾತ್ಮಕ ನಾಟಕಗಳನ್ನು ರಂಗದ ಮೇಲೆ ಕಟ್ಟಿಕೊಟ್ಟಿದೆ. ಹವ್ಯಾಸಿ, ಪೌರಾಣಿಕ, ಸಾಮಾಜಿಕ ಎಲ್ಲ ರೀತಿಯ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ. ಹೊಸ ಕಲಾವಿದರನ್ನು ರಂಗಕ್ಕೆ ಪರಿಚಯಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇವರಿಂದ ಮತ್ತಷ್ಟು ಒಳ್ಳೆಯ ನಾಟಕಗಳನ್ನು ನಿರೀಕ್ಷೆ ಮಾಡೋಣ ಎಂದು ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲೆ ಪ್ರೊ. ಎಸ್.ಆರ್.ಲೀಲಾವತಿ ಮಾತನಾಡಿ, ರಾಮಾಯಣ, ಮಹಾಭಾರತಗಳು ನಮಗೆ ಅನೇಕ ಧನಾತ್ಮಕ ಅಂಶಗಳನ್ನು ನೀಡಿದೆ. ಶತೃವಿನಲ್ಲಿರುವ ಒಳ್ಳೆಯ ಗುಣಗಳನ್ನು ಹೊಗಳುವುದು. ಜಾತಿಯಿಂದ ಅಧಿಕಾರ ವಂಚಿತನಾಗುವ ಕರ್ಣನಿಗೆ ಅಂಗಾಧಿಪತಿ ಸ್ಥಾನ ನೀಡುವುದು. ಈ ಎಲ್ಲಾ ಘಟನೆಗಳು ನಮ್ಮಲ್ಲಿ ಒಳ್ಳೆಯ ಗುಣಗಳು ಉಳಿಸಲು ಸಹಕಾರಿಯಾಗಿವೆ. ಮಹಾಭಾರತದ ಎಲ್ಲಾ ಪಾತ್ರಗಳಲ್ಲಿಯೂ ಒಳ್ಳೆಯ ಗುಣಗಳಿವೆ ಎಂದರು.
ಜಾನಪದ ಕಲಾವಿದ ವೀರಲಗೊಂದಿ ನಾಗರಾಜು ಮಾತನಾಡಿ, ಇಡೀ ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಜನಪದ ಕಲೆಗಳಿರುವ ರಾಜ್ಯ ಕರ್ನಾಟಕ. ಒಂದು ಸಂಶೋಧನೆಯ ಪ್ರಕಾರ ರಾಜ್ಯದಲ್ಲಿ ಸುಮಾರು 170ಕ್ಕೂ ಹೆಚ್ಚು ಜನಪದ ಕಲೆಗಳು ಜೀವಂತವಾಗಿವೆ. ಅಳಿವಿನ ಅಂಚಿನಲ್ಲಿರುವ ಬಯಲಾಟ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಮುಂದಾಗಲಿ ಎಂದರು.
ಕರ್ನಾಟಕ ಜನಪದ ಸಂಗೀತ, ಯಕ್ಷಗಾನ, ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಡಾ.ಕೆ.ಸಣ್ಣಹೊನ್ನಯ್ಯ ಮಾತನಾಡಿ, ಜೀವನವೆಂಬುದೇ ಒಂದು ನಾಟಕ. ತಾಯಿಯೇ ನಾಯಕಿ, ತಂದೆಯೇ ನಾಯಕ, ಮಕ್ಕಳೆಲ್ಲಾ ಪೋಷಕ ಪಾತ್ರಗಳು. ಈ ಜೀವನದ ನಾಟಕವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೆ ಜೀವನ ಸುಗಮವಾಗಲಿದೆ. ಕಲೆ ಎಂಬುದು ಮನುಷ್ಯನನ್ನು ಯಾವಾಗಲು ಜೀವಂತವಾಗಿ ಇಡಲಿದೆ. ಕಲೆಯ ಮೂಲಕ ಮನಸ್ಸಿನ ನೋವು ಮರೆಯಬಹುದು. ಕಳೆದ 15 ವರ್ಷಗಳಿಂದ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಿರಂತರವಾಗಿ ರಂಗಭೂಮಿಯ ಸೇವೆಯಲ್ಲಿ ತೊಡಗಿದೆ. ಯುವಕರೇ ಹೆಚ್ಚು ಇರುವ ಈ ತಂಡ, ಹೊಸ ನಾಟಕಗಳ ಜೊತೆಗೆ, ಹೊಸ ಕಲಾವಿದರನ್ನು ರಂಗಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.
ತುಮಕೂರು: ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ
ವೇದಿಕೆಯಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ನಿರ್ದೇಶಕ ಶಿವಕುಮಾರ್ ತಿಮ್ಮಲಾಪುರ, ರಂಗಸೊಗಡು ಸಿದ್ದರಾಜು, ರಚನಾ ರಮೇಶ್, ಆಶ್ವಿನಿ, ಶಿಕ್ಷಕರಾದ ದಯಾನಂದ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎಸ್.ಸಿ.ಕೃಷ್ಣಶರ್ಮ ವಿರಚಿತ ನಾಟಕ ಸುಯೋಧನ, ಕಾಂತರಾಜು ಕೌತುಮಾರನಹಳ್ಳಿ ಅವರ ನಿರ್ದೇಶನದಲ್ಲಿ ಪ್ರಯೋಗ ಕಂಡಿತ್ತು.
ತುಮಕೂರು: ಕೃಷಿ ಇಲಾಖೆ ಅಧಿಕಾರಿಗಳು ದಾಳಿ: ನಿಷೇಧಿತ ಕೀಟನಾಶಕ ಪತ್ತೆ
+ There are no comments
Add yours